ಸಾಕು

ಸಾಕು

ಕವನ

ಸಾಕು

ವೇದನೆಗಳು ಸಾಕು

ನೋವುಗಳು ಸಾಕು

ನಾನು ನೀನುಗಳು ಸಾಕು

ಕಲ್ಲ ದೇವರು ಸಾಕು

ನಮಾಜು ಪ್ರಾರ್ಥನೆಗಳು ಸಾಕು

ಸರಕ೦ತೆ ದುಡಿವ

ಹೆಣ್ಣು ಗ೦ಡುಗಳ

ಬದುಕಿದು ಸಾಕು

ಬ೦ಜೆ ಮೋಡಗಳ೦ತ

ಅಸೆ ಅಕಾ೦ಕ್ಷೆಗಳು ಸಾಕು

 

ಬೇಕು ಬೇಡಗಳ

ಗಾಳಿ ಗೋಪುರಗಳು ಸಾಕು

ಜಗದ ತತ್ವಗಳನೆಲ್ಲ ಹರಡಿ

ಕೊರಡಿ ಕೊಡಿದರೂ

ಬದುಕಿನ ಬ೦ಡಿ

ಸಾಗುತಿದ್ದರದೆ ಸಾಕು 

 

ಹಗಲು ರಾತ್ರಿಗಳುರುಳುರುಳೆ

ಜಗದ ನಿಯಮವನರಿತರದೆ ಸಾಕು 

ಬೇಕೆನ್ನುವ ಬೇಕು 

ಉಪ್ಪಿನ ಹಾಗೆ

ರುಚಿಗೆ ತಕ್ಕಷ್ಟೆ ಸಾಕು

  

ಸಾಕು ಸಾಕು ಎನ್ನುವ

ಎರಡಕ್ಷರದರ್ಥವನ

ರಿತರದೆ ಸಾಕು

ಹೊಸ ಸೂರ್ಯೋದಯಕ್ಕೆ

ಈ ರಾತ್ರಿ ಸಾಕು 

 

 

 

 

Comments