ಅನುಭವ ವಾಣಿ

ಅನುಭವ ವಾಣಿ

*ಕರ್ತವ್ಯ*

ಪ್ರತಿಯೊಬ್ಬನೂ ತನ್ನ ಮನೆಯಂಗಳವನ್ನು ಗುಡಿಸಿದರೆ ಇಡೀ ಊರೇ ಸ್ವಚ್ಛವಾಗುತ್ತದೆ.

*ಕೃತಜ್ಞತೆ* 

ದೋಷವಿರುವ ಗಂಡನನ್ನು/ಹೆಂಡತಿಯನ್ನು ತನಗೆ ದೊರಕಿಸಿದ ಬಗೆಗೆ ಹೆಂಗಸು/ಗಂಡಸು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು.ಏಕೆಂದರೆ ದೋಷ ಇಲ್ಲದಿರುವ ಗಂಡನು/ಹೆಂಡತಿ ಭಾರೀ ಗಂಡಾಂತರ ಕಾರಿಯಾಗಿರುತ್ತಾರೆ.

*ಗಂಡ*

  ಸುಖದ ಬೆನ್ನು ಹತ್ತಿ ತನ್ನ ಸ್ವಾತಂತ್ರವನ್ನು ಕಳೆದುಕೊಂಡ ಮನುಷ್ಯನಿಗೆ ಗಂಡನೆನ್ನುತ್ತಾರೆ.

*ಗಂಡಸು* 

 ಗಂಡಸು ಭಾರೀ ವಿಚಿತ್ರಪ್ರಾಣಿ ಹೋಟೇಲಿಗೆ ಹೋದಾಗ ಅಲ್ಲಿ ಅವನು ಮನೆಯ ಊಟ ಬಯಸುತ್ತಾನೆ ಮನೆಯಲ್ಲಿ ಇದ್ದಾಗ ಹೋಟಲ್ ಸೇವೆ ಆಪೇಕ್ಷಿಸುತ್ತಾನೆ.

*ಗೃಹಿಣಿ*

  ಗೃಹಿಣಿ ಎಂದರೆ ಮನೆಯ ವಸ್ತುಗಳನ್ನು ಓರಣದಿಂದ ಇಡುವವಳಲ್ಲ.ಮನೆಯವರನ್ನು ಓರಣವಾಗಿ ಮಾಡುವವಳು.

               -ಸಂಗ್ರಹ ಕೃಷ್ಣಮೊರ್ತಿಅಜ್ಜಹಳ್ಳಿ

Rating
No votes yet

Comments