ಕನ್ನಡ ಮುತ್ತು ಗತ್ತು

ಕನ್ನಡ ಮುತ್ತು ಗತ್ತು

 


ಕೆಲಸದ ಗಡಿಬಿಡಿಯಲ್ಲಿ ಫೋನ್ ರಿಂಗಣಿಸಿದಾಗ ಆ ಕಡೆ ಯಿಂದ ಭಾರತೀಯ ಧ್ವನಿ ಇಂಗ್ಲಿಷ್ ನಲ್ಲಿ "ಮೇಡಂ ನಾನು ಕರಿಯಪ್ಪ ಗುಂಡಪ್ಪ" ಎಂದು ಪರಿಚಯ ಮಾಡಿಕೊಂಡು ತಮ್ಮ ರಿಸರ್ಚ್ ಬಗ್ಗೆ ಹೇಳಿಕೊಂಡು ರಿಸರ್ಚ್ ಶುರು ಮಾಡಲು ಹೇಗೆ ಅನುಮತಿ ಪಡೆಯುವುದು ಎಂದು ಕೇಳಿಕೊಂಡರು.  ನಾನು ಅವರಿಗೆ ಇಂಗ್ಲಿಷ್ ನಲ್ಲೆ ಅವರಿಗೆ ಬೇಕಾದ ವಿವರವನ್ನಿತ್ತೆ.  ಅವರೂ ಇಂಗ್ಲಿಷ್ ನಲ್ಲೆ ನಾನು ಹೇಳಿದ ಹಾಗೆ ಮಾಡುವೆನು ಎಂದರು. ನನಗರಿವಿಲ್ಲದಂತೆಯೇ ಬಿತ್ತು ನನ್ನ ಬಾಯಿಯಿಂದ ಕನ್ನಡ ಪದದ ಮುತ್ತು! "ಆಯ್ತು" ಎಂದು! ಆ ಕಡೆಯಿಂದ ಕೇಳಿಬಂತು ಮೇಡಂ ನೀವು ಕನ್ನಡದವರ? .  ನಾನೆಂದೆ "ನೋಡಿ ನನಗರಿವಿಲ್ಲದಂತೆ ನಾನು ಕನ್ನಡದಲ್ಲಿ ಮಾತನಾಡಿಬಿಟ್ಟೆ. 

 

ಬಹಳ ವರ್ಷಗಳಿಂದ  ಕನ್ನಡದಲ್ಲಿ ಮಾತನಾಡಲೂ ಯಾರು ಇಲ್ಲ.  ನನ್ನ ಪತಿ ದೇವನಿಗೆ ಕೆಲವು ಕನ್ನಡ ಪದಗಳನ್ನು ಕಲಿಸಿದ್ದೇನೆ.  ತುಂಬಾ ಸಂತೋಷದಿಂದ ಸಿಟ್ಟು ಬಂದಾಗಲೆಲ್ಲ ಕನ್ನಡದಲ್ಲೇ ಅವರಿಗೆ ಬೈಯುತ್ತೇನೆ.  ಅದೇ ಮಾತನ್ನೇ ಇಂಗ್ಲೀಷಿನಲ್ಲಿ ಹೇಳಿದರೆ ಎಂಥಹ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇನೆ! ಅಬ್ಬಬ್ಬ! ಕನ್ನಡ ತಾಯಿಗೆ ನಮೋ ನಮಃ.

Comments