ತಿಂಡಿಗಳ ಪಜೀತಿ ಅವತಾರಗಳು.

ತಿಂಡಿಗಳ ಪಜೀತಿ ಅವತಾರಗಳು.

 


ನನ್ನ ಪತಿ ದೇವನಿಗೆ ನಮ್ಮ ಭಾರತೀಯ ಅಡುಗೆ ರುಚಿ ಕಲಿಸುವುದರೊಂದಿಗೆ ನಾನು ಕಲಿಯುತ್ತಿದ್ದೇನೆ ನಮ್ಮ ತಿಂಡಿಗಳ ಅವತಾರ ಬದಲಾಯಿಸುವ ಅವರ ವೈಖರಿ!

 

ಮೊದಲು ದೋಸೆ ಮಾಡಿಕೊಟ್ಟೆ.  ಅವರು ಒಂದು ದೋಸೆ ತಿಂದು "ಇದರ ಮೇಲೆ bacon ಇಟ್ಟುಕೊಂಡು ತಿಂದರೆ ಎಂಥಹ ಚೆನ್ನಾಗಿರುತ್ತದೆ" ಎಂದರು.  ನಾನು ಮನಸ್ಸಿನಲ್ಲೇ "ಅಬ್ಬಬ್ಬ, ದೋಸೆ ಮೇಲೆ ಹಂದಿ ಮಾಂಸವೇ? ರಾಮ ರಾಮ" ಎಂದುಕೊಂಡೆ.

 

ಮೊನ್ನೆ ಇಂಡಿಯನ್ restaurent ಗೆ ಹೋಗಿದ್ದೆವು.  ಅವರಿಗೆ ತುಂಬಾ ಮಸಾಲೆಯ ತಿಂಡಿ ತಿಂದರೆ ಎದೆ ಉರಿ ಬರುತ್ತಾದ್ದರಿಂದ ನಾನು ಹೇಳಿದೆ "ಏನೂ ಚಿಂತೆ ಮಾಡಿಕೊಬೇಡಿ, ನಾನು ಮಸಾಲೆಯೇ ಇಲ್ಲದ ತಿಂಡಿ ಇಡ್ಲಿ ಕೊಡಿಸುತ್ತೇನೆ" ಎಂದೆ.  ಇಡ್ಲಿ ಯ ವರ್ಣನೆ ಮಾಡುವಷ್ಟರಲ್ಲಿ ಅವರಿಗೆ ಭಯವಾಯಿತೋ ಏನೋ, ಅವರು "ಏನೂ ಬೇಡ ಬಿಡು ನಾನು ಬರೀ ಬಿಳಿ ಆನ್ನ ತಿನ್ನುತ್ತೇನೆ" ಎಂದರು.  ನನಗೆ ದುಃಖವಾಯಿತು.  Vegetable  ಪಲಾವ್ ಅವರು ತಿನ್ನುವುದೇ ಸರಿ ಎನ್ನಿಸಿತು.  ಅದು ಬಂದ ತಕ್ಷಣ "ರುಚಿ ನೋಡು" ಎಂದು ನನಗೆ ಹೇಳಿದರು.  ನಮ್ಮ ತಿಂಡಿಗಳನ್ನು ನಾನು ತಿಂದು ಎಷ್ಟೋ ವರುಷ ವಾಗಿದೆ ಅದು ನನಗೆ ಖಾರ ಎನ್ನಿಸಿತು.  ನಾನು ನನ್ನ ಪತಿಗೆ ಹೇಳಿದೆ.  " ಏನೂ ಪರವಾಗಿಲ್ಲ, ನಾನು ತುಪ್ಪ ತರಿಸುತ್ತೇನೆ" ಎಂದು ತುಪ್ಪದ ವರ್ಣನೆ ಮಾಡಿದೆ. ಅವರಿಗೆ ಭಯವಾಯಿತೇನೋ "ಇರಲಿ ಬಿಡು ಅದೆಲ್ಲ ಕಷ್ಟ ಯಾಕೆ" ಎಂದರು.  ವೈಟರ್ ತುಪ್ಪ ತಂದ.   ಬಟ್ಟಲು ದೊಡ್ಡದಾಗಿತ್ತು! ನಾನು ನೋಡುತ್ತಿದ್ದಂತೆ ಇವರು ತುಪ್ಪದ ಬಟ್ಟಲಲ್ಲಿದ್ದ ತುಪ್ಪವನ್ನೆಲ್ಲ ಅವರ ತಟ್ಟೆ ಯಲ್ಲಿದ್ದ  ಪಲಾವ್ ಗೆ ಸುರಿದುಕೊಂಡು ಊಟ ಮಾಡಲು ಶುರು ಮಾಡಿದರು.  ನನಗೆ ಸಂಕಟ ವಾಯಿತು.  "ಅಯ್ಯೋ ದೇವರೇ ಇವರಿಗೆ ಎಷ್ಟೊಂದು ಜಿಡ್ಡು ತಿನ್ನಿಸಿಬಿಟ್ಟೆ" ಎಂದು.

 

ನನ್ನ ತಟ್ಟೆಯಲ್ಲಿದ್ದ ವಿಧ ವಿಧವಾದ ಸಾರು ಗಳನ್ನು ನೋಡಿ ರಸಂ ತೋರಿಸಿ  "ಏನಿದು?" ಎಂದರು.  ನಾನು "ಅದು ಟೊಮೇಟೊ, ನೀರು ಮತ್ತು ಮೆಣಸಿನಿಂದ ಮಾಡಿದ್ದು, ಮೈ ಸರಿ ಇಲ್ಲದಾಗ ಕುಡಿಯುತ್ತಾರೆ ಎಂದೆ

 

ಕೊನೆಗೆ ಪಾಯಸ ತೋರಿಸಿ ಕುಡಿಯಲು ಕೊಟ್ಟೆ.  ಅವರೆಂದರು "ಇದನ್ನು ಬಿಸಿ ಬಿಸಿ pan  ಕೇಕ್ ಮೇಲೆ ಸುರಿದು  ಕೊಂಡು ತಿಂದರೆ ಎಂಥಹ ಚೆನ್ನಾಗಿರುತ್ತದೆ" ಎಂದರು.  ಇನ್ನು ಮೇಲಿಂದ  ಇವರ ತಿಂಡಿಯ ಅವತಾರ ಗಳ ಬಗ್ಗೆ ನಾನು ಪುಸ್ತಕವೇ ಬರೆಯಬಹುದೇನೋ. 

 


 

Comments