ರಸ ಪ್ರಶ್ನೆ ೨
ರಸ ಪ್ರಶ್ನೆ ೨
೬. ಇಂಗ್ಲೀಷಿನಲ್ಲಿ ಅತೀ ಹೆಚ್ಚು ಉಪಯೋಗಿಸಲ್ಪಡುವ ಹಾಗೂ ಅತೀ ಕಡಿಮೆ ಉಪಯೋಗಿಸಲ್ಪಡುವ ಅಕ್ಷರ ಯಾವುದು?
೭. ಕಣ್ಣಿನಲ್ಲಿ ಕೂದಲು ಇರುವ ಪ್ರಾಣಿ ಯಾವುದು?
೭. " ಸ್ವಾಮೀ ಮಹಾ ಪುರುಷರೇ ನೀವೊಬ್ಬರು ಮಹಾ ಮೂರ್ಖರು" ಅನ್ನೋ ಹಾಗೆ ಬಯ್ಯಬೇಕಾದರು ಸುಸಂಸ್ಕೃತವಾಗಿ ಬಯ್ಯುವ ಭಾಷೆ ಯಾವುದು?
೮. ಮೂವರು ಸ್ನೇಹಿತರು ಹೋಟೆಲ್ಲಿಗೆ ಹೋಗಿ ತಿಂಡಿ ತಿನ್ನುತ್ತಾರೆ. ಒಟ್ಟು ೨೫ ರೂಪಾಯಿ ಬಿಲ್ಲ್ ಆಗುತ್ತದೆ. ಮೂವರೂ ಹತ್ತು ಹತ್ತು ರೂಪಾಯಿಕೊಡುತ್ತಾರೆ.
ಮಾಣಿ ವಾಪಾಸ್ಸು ತಂದ ಐದರಲ್ಲಿ ಹಂಚಿಕೊಳ್ಳಲು ಸುಲಭವಾಗಲಿ ಅಂತ ತಾನೇ ಎರಡನ್ನು ಜೇಬಿಗಿಳಿಸುತ್ತಾನೆ.
ಮೂವರಿಗೆ ಒಂದೊಂದು ವಾಪಾಸ್ಸು ಬಂತು. ಅಂದರೆ ೯ ಮೂರಲಿ ಇಪ್ಪತೇಳು, ಮಾಣಿ ಕಿಸೆಯಲ್ಲಿ ಎರಡು ಇಪ್ಪತೊಂಬತ್ತಾಯ್ತು. ಕೊಟ್ಟ ಮೂವತ್ತರಲ್ಲಿ .
ಬಾಕಿ ಒಂದು ಎಲ್ಲಿಗೆ ಹೋಯ್ತು?
೯ ಪ್ರತಿ ಸಾರಿ ಸಂತೆಗೆ ಹೊರಡುವ ಸೀನ ಪಿಣಿಯ ಮೂವತ್ತು ಮೂವತ್ತು ಕೇಜಿ ಅಕ್ಕಿ ಮಾರಾಟ ಮಾಡುತ್ತಾರೆ. ಪಿಣಿಯನದ್ದು ಎರಡು ಕೇಜಿಗೆ ಹತ್ತು ರೂ ಆದರೆ ಸೀನನದ್ದು ಹತ್ತು ರೂಗೆ ಮೂರು ಕೇಜಿ.ಮಾರಾಟ ಮಾಡಿದಾಗ ಪಿಣಿಯನಿಗೆ ನೂರು ಮತ್ತು ಸೀನನಿಗೆ ನೂರೈವತ್ತು ರೂಪಾಯಿ ಸಿಗುತ್ತದೆ.
ಈ ಸಾರಿ ಪಿಣಿಯ ಸೀನನಿಗೆ ತನ್ನ ಅಕ್ಕಿಯನ್ನು ಕೊಟ್ಟ. ಸೀನ ಬುದ್ದಿವಂತಿಗೆ ತೋರಿಸಿದ. ತನ್ನ ಪಿಣಿಯನ ಅಕ್ಕಿ ಒಟ್ಟಿಗೆ ಸೇರಿಸಿ ೫ ಕೇಜಿಗೆ ೨೦ ರೂಪಾಯಿಯಂತೆ ಮಾರಿದ . ಆದರೆ ಅವನಿಗೆ ಸಿಕ್ಕಿದ್ದು ೨೪೦ ರೂ ಮಾತ್ರ ಬಾಕಿ ಹತ್ತು ರೂ ಎಲ್ಲಿಗೆ ಹೋಯ್ತು? ಇಲ್ಲಿ ನಷ್ಟವಾಯ್ತಾ ?
೧೦. ಕನ್ನಡದಲ್ಲಿ ಅತೀ ಹೆಚ್ಚು ಉಪಯೋಗಿಸಲ್ಪಡುವ ಹಾಗೂ ಅತೀ ಕಡಿಮೆ ಉಪಯೋಗಿಸಲ್ಪಡುವ ಅಕ್ಷರ ಯಾವುದು?
Comments
ಉ: ರಸ ಪ್ರಶ್ನೆ ೨
In reply to ಉ: ರಸ ಪ್ರಶ್ನೆ ೨ by asuhegde
ಉ: ರಸ ಪ್ರಶ್ನೆ ೨
ಉ: ರಸ ಪ್ರಶ್ನೆ ೨
ಉ: ರಸ ಪ್ರಶ್ನೆ ೨