ಬದುಕೆಂದರೇ ಇದು ಮಾತ್ರವೇ?

ಬದುಕೆಂದರೇ ಇದು ಮಾತ್ರವೇ?

ಕವನ

ಇಮೇಲ್,ಮೆಸೇಜುಗಳಲ್ಲಿ.
ಕೆಫೆ,ಪಬ್ಬುಗಳಲ್ಲಿ,
ಮಬ್ಬು ಬಾರುಗಳಲ್ಲಿ,
ತುಂಡುಗುಂಡು,ಬೀಡಿಸಿಗರೇಟಿನ ಮತ್ತಿನಲ್ಲಿ ಕಳೆದುಹೋಗುವ ಮುನ್ನ
ಓ ಯುವಗೆಳೆಯರೇ ಇತ್ತ ಕೇಳಿ ಬದುಕೆಂದರೇ ಇದು ಮಾತ್ರವೇ?

ಮಚ್ಚುಲಾಂಗಿನ ನಾಯಕನ
ಹುಚ್ಚು ಆದರ್ಶವ ಪಾಲಿಸುತ್ತಾ ಎದೆಕೈಗಳಿಗೆ ಪ್ರೀತಿಯ ಅಕ್ಷರವ ಕೆತ್ತಿ ಸುಂದರ ಪ್ರೀತಿಯ ವಿಕೃತಗೊಳಿಸುವ ಮುನ್ನ
ಯುವಗೆಳೆಯರೇ ಇತ್ತ ಕೇಳಿ
ಬದುಕೆಂದರೇ ಇದು ಮಾತ್ರವೇ.

ತಂದೆತಾಯಿಯ ಬೆವರ ಸಿನಿಮಾ ಪಾರ್ಟಿಗೇ,ಷೋಕಿ,ಚಟಗಳಿಗೆ ಖರ್ಚು ಮಾಡುವ ಮುನ್ನ
ಓ ಯುವಗೆಳೆಯರೇ ಇತ್ತ ಕೇಳಿ,
ಬದುಕೆಂದರೇ ಇದು ಮಾತ್ರವೇ?
ಹಗಲಿರುಳು ದುಡಿದು ಎಲುಬಿನ ಗೂಡಾದ ತಾಯಿಯ,ಸೂಟು ಬೂಟಿನ ಜೀನ್ಸುಪ್ಯಾಂಟಿನ ಸದೃಡ ಯುವಗೆಳೆಯರೇ ಇತ್ತ ಕೇಳಿ ಬದುಕೆಂದರೇ ಇದು ಮಾತ್ರವೇ.

Comments