ಸ್ನೇಹಕ್ಕೆ ಒಂದು ಹೊಸ ಮುನ್ನುಡಿ

ಸ್ನೇಹಕ್ಕೆ ಒಂದು ಹೊಸ ಮುನ್ನುಡಿ

ಕವನ

 
ಹೃದಯದಾಳದಲಿ ಅವಿತುಕುಳಿತಿರುವ
 ಸ್ನೇಹದ ಕರೆಗೆ ಓಗೊಡದ ಮನವು
ಇಂದು ನಿನ್ನ ಹುಸಿನುಡಿಗೆ ಹಾತೊರೆದಿದೆ,
ಇದು ಸ್ನೇಹದ ಕಲರವವೋ,
ಕವಿ ಮನಸ್ಸಿನ ಕುಹೂ ಕುಹುವೋ,
 ಮನಸ್ಸಿಗೆ ತೋಚದಾಗಿದೆ
ಗೆಳೆತನದ ಗವಿಯಲ್ಲಿನಿಂತ  ಕೇಕೆಯ ಕೂಗು
 ನಿನ್ನ ಮನಸ್ಸೇಕೆ ಅರಿಯದಾಗಿದೆ ?
 
ಜಪ  ತಪಗಳಿಗೆ ತಣಿಯದ ಈ ಮನವು,
 ಸ್ನೇಹದ ತಂಗಾಳಿಗೆ ನಲಿದಿದೆ ಪ್ರತಿ ಗಳಿಗೆಯು
ಜೀವನದ ಜೋಪಡಿಯಲ್ಲಿನಲಿವು ನೋವುಗಳು ನೂರು,
 ನಲಿವಿಗೆ ನಿನ್ನನ್ನು ಕರೆವ ಮನವು
ನೋವಿಗೆ ನಿನ್ನ ಹೆಸರೊಂದೇ  ಸಾಕೆಂದಿದೆ ಹುಸಿಮುನಿಸು
ಪ್ರತಿಕ್ಷಣವು ಸ್ನೇಹದ ಪರಿ ಹಲವು ,
ಪ್ರತಿ ಪರಿಯಲಿ ನಿನ್ನದೇ ಕುರುಹು,
ಗಹಗಹಿಸಿನ ಗುತಿದೆ ಜಗವು,
ನಮ್ಮೀ ಸ್ನೇಹದ ತ್ರಾಣ ನೋಟದಲಿ
 
ನಲಿವುಗಳೆನು ಮೋಡಗಳಲ್ಲ ,
ನೋವುಗಳೆನು ಸಾಗರವಲ್ಲ
ಸಹಿಸುವ ಮನಕೆ ಸ್ನೇಹದ ಆಸರೆ,
ತುಂತುರು ಹನಿಯ ಚಿಟಪಟ ಸಿಹಿಮಳೆ
ಜೀವನ ಒಂದು ನಿತ್ಯ  ಪಂಜರ ,
ಸ್ನೇಹಕೆ ಇಲ್ಲಯಾವುದೇ ಹಂದರಾ
ಪ್ರತಿ  ಕ್ಷಣವು ನಲಿಯಲಿ ನನ್ನೀ ಸ್ನೇಹವು,
ನಿನ್ನಯ ನಗುವು ಅದರಲ್ಲೊಂದಗಿರಲು
 
ಕೋಟಿ ಕೋಟಿ ಕನಸುಗಳು ನನ್ನೀ ಕಣ್ಣಲಿ,
ಆ ಕಣ್ಣಿಗೆ ನಿನ್ನಾ ಸ್ನೇಹವೇ ಮುನ್ನುಡಿ
ಕನಸುಗಳೆಕೋ ಕೊರಗುತಾ ನಿಂತಿವೆ ,
ನಿನ್ನೀ ದೂರವ ಸಹಿಸದೆ  ಕರಗಿವೆ
ಕಾಣದ ಕೋಣೆಗೆ ಸರಿದಿದೆ ಕವನವು ,
ನಿನ್ನಾ ಬರುವಿಕೆಯ ಹಾದಿಯಲಿ ನೋಟವು