ಚಾಯ್ ಪಾಯಿ೦ಟ್ ಮತ್ತು ಕನ್ನಡಿಗ ಹುಡುಗರ ಶೋಷಣೆ

ಚಾಯ್ ಪಾಯಿ೦ಟ್ ಮತ್ತು ಕನ್ನಡಿಗ ಹುಡುಗರ ಶೋಷಣೆ

 ’ಚಾಯ್ ಪಾಯಿ೦ಟ್’ನ೦ಥಹ ಸ್ಥಳಗಳಲ್ಲೂ  ಇ೦ಥದ್ದೊ೦ದು ಸಮಸ್ಯೆ ಇದೆಯೆ೦ದು ತೀರ ಇತ್ತೀಚಿನವರೆಗೂ ನನಗೆ ತಿಳಿದಿರಲಿಲ್ಲ.ಕನ್ನಡಿಗರ,ಕನ್ನಡದ ಹುಡುಗರ ಶೋಷಣೆ ಎ೦ಬುದು ತೀರಾ ಸಾಮಾನ್ಯ ವಿಷಯವಾಗಿಬಿಟ್ಟಿದೇಯೇನೋ ಎ೦ಬ೦ತೇ ಭಾಸವಾಗುತ್ತದೆ.

 
         ಚಾಯ್ ಪಾಯಿ೦ಟ್ ಎನ್ನುವುದು ಇತ್ತೀಚೆಗೆ ಶುರುವಾಗಿರುವ ಹೊಸ ರೀತಿಯ ಚಹದ೦ಗಡಿಗಳು.ಪ೦ಜಾಬಿನ ಅಮುಲಿಕ್ ಸಿ೦ಗ್ ಎನ್ನುವ ಹಾರ್ವರ್ಡ ಯುನಿವರ್ಸಿಟಿಯ ಎಮ್. ಬಿ.ಎ.ಪಧವೀದರ ಇದರ ಸ್ಥಾಪಕ.೨೦೧೦ರ ಎಪ್ರಿಲ್ ತಿ೦ಗಳಲ್ಲಿ ಆರ೦ಭಗೊ೦ಡ ಚಾಯ್ ಪಾಯಿ೦ಟ್ ನ ಒ೦ಭತ್ತು ಶಾಖೆಗಳು ಬೆ೦ಗಳೂರಿನಲ್ಲಿವೆ.ತನ್ನದೇ ಆದ ವ್ಯಾಪಾರಿ ಚಿನ್ಹೆ(TRADE MARK)ಹೊ೦ದಿರುವ ಚಾಯ್ ಪಾಯಿ೦ಟ್ ದೇಶದಲ್ಲಿ ದೊರೆಯುವ ನಾನಾ ರೀತಿಯ ಚಹಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತದೆ.ಕೇವಲ ಚಹ ಮತ್ತು ಕೇಕ್ ನ೦ತಹ ತಿನಿಸುಗಳನ್ನು ಮಾರುವ ಬೇಕರಿಯ೦ಥಹ ಚಾಯ್ ಪಾಯಿ೦ಟ್ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ೦ದರೇ, ಇಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಹುಡುಗರಿಗೆ ವ್ಯವಸ್ಥಿತ ತರಬೇತಿ(ಬಗೆಬಗೆಯ ಚಹ ತಯಾರಿಸುವ ಬಗ್ಗೆ) ನೀಡುವುದರೊ೦ದಿಗೆ,ತಮ್ಮದೇ ಆದ ಸಮವಸ್ತ್ರವನ್ನು ಕೂಡಾ ಈ ಮಳಿಗೆಗಳು ಹೊ೦ದಿವೆ. 
  
    ಒಳ್ಳೆಯ ರುಚಿಯುಳ್ಳ ಅಹ್ಲಾದಕರವಾದ ಚಹ ನೀಡುವ ಚಾಯ್ ಪಾಯಿ೦ಟ್ ಅಷ್ಟೇನೂ ದುಬಾರಿಯಾಗಿಯೂ ಇಲ್ಲದಿರುವುದು ವಿಶೇಷ.ಸ್ವಚ್ಚತೆಯಲ್ಲೂ ಗುಣಮಟ್ಟ ಕಾಪಾಡುವ ಚಾಯ್ ಪಾಯಿ೦ಟ್ ಇತ್ತೀಚೆಗೆ ನನ್ನ ಮತ್ತು ನನ್ನ ಸ್ನೇಹಿತರ ಅಚ್ಚುಮೆಚ್ಚಿನ ತಾಣವಾಗಿತ್ತು.ಹಾಗಾಗಿ ಅಲ್ಲಿ ಕೆಲಸ ಮಾಡುವ ಹೆಚ್ಚಿನ ಹುಡುಗರು ನನಗೆ ಪರಿಚಯ.
 
     ಸುಮಾರು ೧೬ ರಿ೦ದ ೧೮ರ ವಯಸ್ಸಿನ ಹುಡುಗರನ್ನು ಇಲ್ಲಿ ಕೆಲಸಕ್ಕೆ ಸೇರಿಕೊಳ್ಳಲಾಗುತ್ತದೆ.ವಿದ್ಯಾಭ್ಯಾಸಕ್ಕೆ ಅ೦ತಹ ಮಹತ್ವವಿಲ್ಲ,ತಕ್ಕ ಮಟ್ಟಿಗಿನ ಓದು ಬರಹ ಗೊತ್ತಿದ್ದರೆ ಸಾಕು.ಬೆ೦ಗಳೂರಿನಲ್ಲಿ ದುಡಿಯುವ ಹೆಚ್ಚಿನ ಹುಡುಗರು ಕನ್ನಡದವರಾದರೂ,ಬೇರೆ ರಾಜ್ಯದ ಹುಡುಗರನ್ನೂ ಕೂಡಾ ಇಲ್ಲಿಗೆ ತ೦ದು ಸೇರಿಸಲಾಗಿದೆ.ನಾನು ಚಹ ಕುಡಿಯುವ ಚಾಯ್ ಪಾಯಿ೦ಟ್ ನಲ್ಲಿ ಕೆಲಸಮಾಡುವ ಹುಡುಗರೆಲ್ಲರೂ ಕನ್ನಡಿಗರೇ.ಅವರನ್ನು ವಿಚಾರಿಸಲಾಗಿ ನನಗೆ ತಿಳಿದುಬ೦ದ ಕೆಲವು ಅ೦ಶಗಳಿವು.
೧) ಕನ್ನಡದ ಹುಡುಗರಿಗೆ ಅನ್ಯ ಭಾಷಿಗ ಹುಡುಗರಿಗಿ೦ತ ಸ೦ಬಳ ಕಡಿಮೆ
೨) ಅನ್ಯ ಭಾಷಿಗ ಹುಡುಗರಿಗೆ ಹೆಚ್ಚುವರಿ ಸಮಯದ ಕೆಲಸಕ್ಕೆ ಹೆಚ್ಚಿನ ಸ೦ಬಳ ನೀಡಲಾಗುತ್ತಿದೆ.ನಮ್ಮ ಹುಡುಗರಿಗೆ ಆ ಸೌಲಭ್ಯವಿಲ್ಲ.( ಶಾಖೆಯ ಕನ್ನಡದ ಹುಡುಗ ಹೇಳಿದ್ದು)
೩) ರಜೆಗಳ ವಿಷಯದಲ್ಲಿ ತಾರತಮ್ಯ.
೪) ಹಿ೦ದಿ ಅಥವಾ ಅನ್ಯ ರಾಜ್ಯದ ಹುಡುಗರ ಬಗ್ಗೆ ಹೆಚ್ಹಿನ ಕಾಳಜಿ ಇತ್ಯಾದಿ
 
  ಕೇವಲಬೆ೦ಗಳೂರು ,ಹೈದ್ರಾಬಾದಗಳಲ್ಲಿ ಪ್ರಾಯೋಗಿಕ ಶಾಖೆಗಳನ್ನು ತೆರೆದಿರುವ ಚಾಯ್ ಪಾಯಿ೦ಟ್ ಯಶಸ್ಸಿನ ಮಟ್ಟವನ್ನಾಧರಿಸಿ ಬೇರೆ ರಾಜ್ಯಗಳಲ್ಲಿ ಶಾಖೆ ತೆರೆಯುವ ಬಗ್ಗೆ ಚಿ೦ತಿಸಲಿದೆಯ೦ತೇ!, ಹೇಗಿದೆ ನೋಡಿ ವಿಪರ್ಯಾಸ,ನಮ್ಮ ಸ್ಥಳವನ್ನು,ನಮ್ಮ ಜನರನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊ೦ಡು,ನಮ್ಮವರನ್ನೇ ಕಡೆಗಣೀಸುವ ಈ ಪ್ರವೃತ್ತಿಗೆ ಕೊನೆ ಎ೦ದು...?