ಮನದ ಭಾವ...

ಮನದ ಭಾವ...

ಮನದ ಭಾವ...

ನಗುವಿರಾದರೆ ಒಮ್ಮೆ ನಕ್ಕುಬಿಡಿ ಮನತುಂಬಿ
ನಗುವಾಗಲು ಮನದಲ್ಲಿ ಏಕೆ ಬಿಗುಮಾನ ಬಿಂಕ
ನಗುವು  ಕಳೆವುದು ನಿಮ್ಮ ಮನದೆಲ್ಲ ಚಿಂತೆ
ನಗಲು ನಗಿಸಲು ನಿಮಗೆ ಮತ್ತೇನು ಶಂಕೆ

ಅಳುವಿರಾದರೆ ಒಮ್ಮೆ ಅತ್ತುಬಿಡಿ ಮನಪೂರ್ತಿ
ಅಳುವು ಕೊಡುವುದು ಜೀವನಕೆ ಹೊಸಸ್ಪೂರ್ತಿ
ಅಳುವು ಕಳೆವುದು ನಿಜದಿ ಮನದ ಕಳವಳಗಳ
ಅಳುವು ಗುರಿತಿಸುವುದು ತನ್ನ ಅತ್ಮಬಂದುಗಳ


ಮೆಚ್ಚುಗೆ ಅಂದು ಬಿಡಿ ಒಪ್ಪಿದ ಕವಿತೆಗೆ ನಿಮ್ಮ
ಮೆಚ್ಚುಗೆಯೆ ಕುಡಿಯಾಯ್ತು ಮತ್ತೊಂದು ಕವಿತೆಗೆ
ಮೆಚ್ಚುಗೆ ಅನ್ನಲು ಅದೇಕೆ ಬಿಂಕಬಿಗುಮಾನ ನಿಮ್ಮ
ಮೆಚ್ಚುಗೆಯೆ ಕವಿಗಾಯ್ತು ಎಲ್ಲ ಬಿರುದು ಸನ್ಮಾನ

ಹರಿದು ಹೋಗಲಿ ಬಿಡಿ ನಿಮ್ಮ ಮನದೆಲ್ಲ ಭಾವ
ಹರಿವ ನೀರಂತೆ ಇರಲಿ ಮನದಲ್ಲಿ ಪರಿಶುದ್ದ ಭಾವ
ಹರಿದ ಮಳೆಯನಂತರ ಮೇಲೆ ಶುಭ್ರ ಆಕಾಶ
ಹರಿದ ನೀರು ತೊಳೆದ ಇಳೆ  ಪೂರ್ಣ ಪ್ರಕಾಶ


(ಭಾಮಿನಿಯ ಭಾವ ಎಂದು ಕವಿತೆಗೆ ಶೀರ್ಷಿಕೆ ಕೊಟ್ಟೆ ಆದರೆ ಇದು ಭಾಮಿನಿಯಲ್ಲಿಲ್ಲ
 ಶ್ರೀಗಣೇಶ್ ರವರವರು ಹೇಳಿದಂತೆ ದ್ವಿತೀಯಕ್ಷರ ಪ್ರಾಸ ತೆಗೆದುಕೊಂಡರೆ
 ಭಾಮಿನಿಯ ಛಾಯೆ  ಮಾತ್ರ
 ಹಾಗಾಗಿ ಮನದ ಭಾವವೆಂದೆ ಕರೆಯುತ್ತೇನೆ)

Rating
No votes yet

Comments