ಎಸ್.ಎಸ್.ಎಲ್.ಸಿ : ಸುಡುತ್ತೆ ಇಲ್ಲಾ ನೀರ್ ಕುಡಿಸುತ್ತೆ !?
ನಿಜಕ್ಕೂ ನಾಚಿಗೇಡು ! ಇದೇನ್ ವ್ಯವಸ್ಥೆ ? ಇದೇನ್ ಆಡಳಿತಶಾಹಿ ? ಎಸ್.ಎಸ್.ಎಲ್.ಸಿ ಮಕ್ಕಳು ಅಂದ್ರೆ ಇಷ್ಟು ುಉಡಾಫೆನಾ ? ಇಷ್ಟು ನಿರ್ಲಕ್ಷ್ಯಾನಾ ? ಇಷ್ಟೊಂದು ಬೇಜವಬ್ದರಿನಾ? ಮಕ್ಕಳ ಭವಿಷ್ಯಕ್ಕೆ (ಛಿ)ಭದ್ರ ಬುನಾದಿ ಹಾಕೋ ರೀತಿ ಇದೇನಾ ? ಮೊನ್ನೆ ಮೊನ್ನೆ ಸಿಎಂ ತವರು, ಶಿವಮೊಗ್ಗದಲ್ಲಿ ಎಸ್.ಎಸ್.ಎಲ್.ಸಿ ಉತ್ತರಪತ್ರಿಕೆಗಳಷ್ಟು ಸುಟ್ಟು ಕರಕಲಾದ್ವು. ಇದೇ ತಿಂಗಳ 27ಕ್ಕೆ ಆ (ನತ)ಅದೃಷ್ಟ ಮಕ್ಕಳು ಮತ್ತೆ ಪರೀಕ್ಷೆ ಎದುರಿಸ್ತಿದ್ದಾರೆ. ಹೀಗಿರುವಾಗ ಮತ್ತೆ ರಾಜಧಾನಿಯಲ್ಲಿ ಒಂದಷ್ಟು ಉತ್ತರ ಪತ್ರಿಕೆಗಳು ನೀರುಪಾಲಾಗಿವೆ !!! ಎಸ್.ಎಸ್.ಎಲ್.ಸಿ ಮಕ್ಕಳಿಗೆ, ಪೋಷಕರಿಗೆ ಎಂಥ ಆಘಾತ ಅಲ್ವಾ ? ಅದೂ ರಾಜಧಾನಿಯಲ್ಲಿ ಹೀಗಾದ್ರೆ ? ಮತ್ತೆ ಬಡ ಊರುಗಳಲ್ಲಿ ಇನ್ ಹೇಗೆ ?
ಇನ್ನೂ ಎಷ್ಟು ಮಕ್ಕಳ ಭವಿಷ್ಯವನ್ನು ನೀರು ಪಾಲ್ ಮಾಡ್ಬೇಕಂದಿದ್ದೀರಿ ? ಇನ್ನು ಎಷ್ಟು ಮಕ್ಕಳ ಭವಿಷ್ಯವನ್ನ ಸುಡಬೇಕಂತಿದ್ದೀರಿ ? ಮಾನ್ಯ ಸಚಿವರು, ಅಧಿಕಾರಿಗಳು, ನೊಂದ ಬೆಂದ ಸಾರ್ವಜನಿಕರಿಗೆ ಉತ್ತರ ಹೇಳಲೇಬೇಕು. ಎಸ್.ಎಸ್.ಎಲ್.ಸಿ ಅಂದ್ರೆ ನೀರ್ ಉತ್ತರ ಆಗಬಾರದು. ಇದು ಲಕ್ಷಾಂತರ ಮಂದಿಯ ಪ್ರಶ್ನೆ !!!!!!!