ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಕೃತಿ ಬಿಡುಗಡೆ
ಬೆಂಗಳೂರಿನ ರವಿ ಪ್ರಕಾಶನದವರು ಪ್ರಕಟಿಸಿದ ಐದು ಕೃತಿಗಳ ಲೋಕಾರ್ಪಣೆ ಮಾರ್ಚ್ ೨೪ ರಂದು ಬೆಂಗಳೂರಿನ ಹಂಪಿನಗರ ದಲ್ಲಿ ನಡೆಯಿತು.
ಕೃತಿಗಳು :
೧]ಚಿನ್ನದ ನಾಡಿಂದ ಹೊನ್ನ ದ್ವಾರದತ್ತ -ಪ್ರವಾಸ ಕಥನ -ಸರಸ್ವತಿ ಶಂಕರ್
೨]ಅರಗಿನ ಅರಮನೆ-ಡಾ.ಆರ್.ಆರ್.ಪಾಂಗಾಳ
೩]ಕಥಾ ಕೌಮುದಿ-ಡಾ.ವೈ ಎಂ .ಕುಮುದಿನಿ
೪]ನ್ಯಾನೋ ಏನೋ ಏನೇನೋ -ಪ್ರೊ.ಚಿಕ್ಕಮಂಗಪ್ಪ
೫]ಮಲೆಯ ಮಾದೇಶ್ವರ ;ಮೌಖಿಕ ಮಹಾಕಾವ್ಯ -ಸಿಪಿಲೆ ಸತೀಶ್
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಶಿಕ್ಷಣ ತಜ್ಞ ಪ್ರೊ.ಕೆ .ಇ.ರಾಧಾಕೃಷ್ಣ ಅವರು ವಹಿಸಿದ್ದರು. ಹೆಸರಾಂತ ಸಾಹಿತಿ ಡಾ.ನಾ.ಮೊಗಸಾಲೆಯವರು ಕೃತಿಗಳನ್ನು ಬಿಡುಗಡೆ ಮಾಡಿದರು.ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ಗೌರವ ನಿರ್ದೇಶಕರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಮುಖ್ಯ ಅತಿಥಿಗಳಾಗಿದ್ದರು.
ಬಳಿಕ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದವರಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ಜರಗಿತು.
ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಸರಸ್ವತಿ ಶಂಕರ್ ಅವರು ಭೇಟಿ ನೀಡಿದ ದೇಶ-ವಿದೇಶದ ಪ್ರೇಕ್ಷಣೀಯ ಸ್ಥಳಗಳ ಕುರಿತಾದ ಮಾಹಿತಿಪೂರ್ಣ ಕೃತಿ.ಈ ಲೇಖಕಿ ಈಗಾಗಲೇ ಎರಡು ಕಾದಂಬರಿಗಳನ್ನೂ ಎರಡು ಕಥಾಸಂಕಲನಗಳನ್ನೂ ಬರೆದಿರುತ್ತಾರೆ.[ಚಿತ್ರದಲ್ಲಿ ಎಡದಿಂದ ಎರಡನೆಯವರು ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ .]
ಸಂಗ್ರಹಯೋಗ್ಯವಾದ ಈ ಪ್ರವಾಸ ಕಥನವನ್ನು ಕನ್ನಡಿಗರು ಓದಿ ಆನಂದಿಸಲೆಂದು ಸಹೃದಯರ ಹಾರೈಕೆ.