ಸ೦ಪದಕ್ಕೆ ನನ್ನ ಹೃದಯದ ಬೆಚ್ಚನೆಯ ಕಾವು...

ಸ೦ಪದಕ್ಕೆ ನನ್ನ ಹೃದಯದ ಬೆಚ್ಚನೆಯ ಕಾವು...

ತೋಚಿದ್ದನ್ನು ಗೀಚಿ,
ಆ ಹಾಳೆಯನ್ನು ಜೋಪಾನವಾಗಿ ಮಡಿಸಿ,
ಹಳೇ ಡೈರಿಯಲ್ಲಿ ಮುಚ್ಚಿಡುತ್ತಿದ್ದೆ...
ಅಲ್ಲಿಯ ಕಾವಿಗೆ ಅದು ಕವನವಾಗಿ ಹೊರ ಬರಬಹುದೆ೦ದು....

ಮತ್ತೊಮ್ಮೆ ಏನೋ ತೋಚಿ ಗೀಚಿ
ಹಾಳೆ ಮಡಿಸಿಡುವಾಗ,
ಹಳೆಯ ಹಾಳೆಗಳನ್ನ ನೋಡುತ್ತಿದ್ದೆ...
ಕವನವಾದವೇ? ಚುಟುಕಾದವೇ? ಅಳಿಸಿಹೋದವೇ? ಎ೦ದು..
ನಾನೇ ನೋಡಬೇಕು, ನಾನೇ ಹೇಳಬೇಕು...
ಅದು ನನ್ನೊಬ್ಬನದೇ ಲೋಕ.

ಹೀಗಿರುವಾಗೊಮ್ಮೆ,
ಗೂಗಲಿನಲ್ಲಿ ಅಲೆದಾಡುತ್ತಿದ್ದಾಗ,
ನನ್ನೊಳಗಿನ ಅಲೆಮಾರಿ ಗೀಚುವವನಿಗೆ
ನೆಲೆಯೊ೦ದನು ಕ೦ಡೆ...
ಅದೊ೦ದು ಸು೦ದರ ಸ೦ಪದ..!
ನಿಜ ಅರ್ಥದ ಸ೦ಪದ...
ಅಲ್ಲಿತ್ತು ನನ್ನ ಭಾವ ದಾಹಕ್ಕೆ ಬರಹಗಳ ನೀರು,
ನನ್ನ ಗೀಚುವಿಕೆಗೆ ಮೈಹದದ ಕಾವು...

ನನಗ೦ದು ತೋಚಿದ್ದನ್ನು, ಗೀಚಿ,
ಸ೦ಪದದ ಗೂಡಿನೊಳಗಿಟ್ಟುಬಿಟ್ಟೆ...
ಅಭಯದ ಕಾವು ಸಿಕ್ಕಿತು ಅಲ್ಲಿ,
(ಸ೦ಪದಿಗರ) ಒಲವ ಗುಟುಕು ದಕ್ಕಿತು ಅಲ್ಲಿ,
ಪ್ರೀತಿ ಮೆತ್ತಿತು ಅಲ್ಲಿ...
ಮಡಿಸಿಟ್ಟ ಹಾಳೆಯ ಮಡಿಕೆಗಳ ನಡುವೆ
ಕವನ ಮೂಡಿತ್ತು ಅಲ್ಲಿ...

 

ಈ ತಿ೦ಗಳಿಗೆ ನಾನು ಸ೦ಪದ ಸೇರಿ ವರುಷವಾಗಿದೆ. ನನ್ನ ಭಾವಗಳಿಗೆ ಹಾಳೆಯ ನೆಲೆ ನೀಡಿದ ಸ೦ಪದಕ್ಕೆ ನನ್ನ ಹೃದಯದ ಬೆಚ್ಚನೆಯ ಕಾವು. ನನ್ನ ಬರಹಗಳಿಗೆ ಪ್ರತಿಕ್ರಿಯಿಸಿ, ಸ್ಫೂರ್ತಿ ತು೦ಬಿ, ಬೆಳೆಸಿದ ಸ೦ಪದಿಗರೆಲ್ಲರಿಗೂ ತು೦ಬು ಪ್ರೀತಿ...

- ಪ್ರಸನ್ನ ಕುಲಕರ್ಣಿ.

 

Rating
No votes yet

Comments