-ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]
ಕವನ
[ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ]
ಪುಟ ತುಂಬಾ ಗೀಚಿದೆನು ಅಂದು ನಾನು
ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು
ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು
ಓದುವಿರಿ ನನಗುಂಟೆ ಕೊಂಚ ಅನುಮಾನ?
ಹೆಸರಿಲ್ಲದಾ ಕವಿಗೆ ಏಕೆ ಬಿಗುಮಾನ?
ನೀವು ಓದುವಿರೆಂಬ ತುಂಬು ಭರವಸೆಯಿಹುದು
ಹಾಗಾಗಿ ಚಂದದಲಿ ಬರೆದಿಲ್ಲವು
ಅಂಚೆ ಚೀಟಿಯ ಇಡದೇ ಇದ ರವಾನಿಸುತಲಿಹೆ
ಕೃಪೆದೋರಿ ಪ್ರಕಟಿಸಲು ಬೇಕು ನೀವು
ಇಲ್ಲದಿದ್ದರೆ ಇದುವೇ ನನ್ನ ಮತವು-
ಎಲ್ಲ ಓದಲಿ ಎಂದು ನಾನು ಬರೆದವನಲ್ಲ
ಬರೆಯುವುದು ಪ್ರಾರಬ್ಧ ಕರ್ಮ ನನಗೆ
ಓದುವವರಿಹರೆಂದು ನಾ ಬಲ್ಲೆ,ಅದರಿಂದ
ಕಳಿಸಿರುವೆ ಅಂಚೆಯಲಿ ಎಂದಿನಂತೆ
ಯಾರು ಹರಿದಿಕ್ಕಿದರೂ ನನಗಿಲ್ಲ ಚಿಂತೆ
Comments
ಉ: -ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]
ಉ: -ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]
ಉ: -ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]
ಉ: -ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]
ಉ: -ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]