ಮುಂಜಾವು ....

ಮುಂಜಾವು ....

ಕವನ

ಮಂಜಿನ ಬಾಹುವಿನಲ್ಲಿ,
ಅವಿತಿರುವ ಸೂರ್ಯನಂತೆ
ಹೊಂಗಿರಣ ತಂಪಿನಲ್ಲಿ,
ಮೊಡುವ ಪ್ರೀತಿಯಂತೆ

ಬಾನಾಡಿ ಮಾತೆಲ್ಲಾ,
ಹಾಡಾಗಿ ಧ್ವನಿಗೂಡಿ
ಹೋರಟಿದೆ ನೋಡು,
ಮುಂಜಾವಿನ ಸವ್ವಾರಿ
ಕರಗುವ ಮಂಜಲ್ಲಿ,
ಅರ‍ಳುವ ಹೂವಲಿ
ಚಿಗುರುವ ಬಳ್ಳಿಲಿ,
ಅ ಕಣ್ಣ ಮಾಯೆಲಿ

ಹಕ್ಕಿಯ ಹಾಡಲ್ಲಿ,
ಗಾಳಿಯ ತಂಪಲ್ಲಿ
ತೆರೆಗೆಲೆಯ ನಗುವಲ್ಲಿ,
ಆ ನೋಡ ನೋಟದಲ್ಲಿ
ಮಗುವಿನ ಅಳುವಲ್ಲಿ,
ತಾಯಿಯ ಒಲವಲ್ಲಿ
ಗೋವಿನ ಕರೆಯಲ್ಲಿ,
ಮನ ಎನ್ನ ರಂಗವಲ್ಲಿ

ರೈತನ ಶ್ರಮದಲ್ಲಿ,
ಹೊಲದಲ್ಲಿನ ಸುತದಲ್ಲಿ
ನೇಗಿಲಿನ ನೋವಲ್ಲಿ,
ಬಸವನ ಬೆವರಲ್ಲಿ
ಚಿಗುರೊಡೆಯುವ ಧಾನ್ಯಕ್ಕೆ
ನೀ ಜೀವದ ರಸವಲ್ಲಿ

ದೈವದ ಪಥದಲ್ಲಿ,ರಾಜನ ಠೀವಿಲಿ
ಸಪ್ತಶ್ವದ ಮನ್ನಡೆಯಲ್ಲಿ
ಗಗನದ ಅಧಿ-ಪತ್ಯದಲ್ಲಿ
ಹೊಂಗಿರಣ ರಥದಲ್ಲಿ
ಮುಂಜಾವಿನ ರಹದಾರಿ !