ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ

ಕವನ
ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ
ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ
ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ..
ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ...
 
ಕತ್ತಲಾವರಿಸಿದ್ದ ಹೃದಯಮಂದಿರಕೆ ಬೆಳಕಾಗಿ ನೀ ಬಂದೆ
ಉಲ್ಲಾಸದ ಚೈತನ್ಯವ ತುಂಬಲು ನೀ ಎಲ್ಲಿಂದಲೋ ಬಂದೆ
ನಿನ್ನಾಗಮನದಿಂದ ಕುಣಿಯಿತು ನನ್ನೀ ಮನವು ಹರುಷದಿ
ಬೆಲೆ ಕಟ್ಟಲಾಗದು ನೀ ನೀಡಿದ ಮಧುರಾನುಭೂತಿಗೆ...
 
ತಣ್ಣನೆಯ ಗಾಳಿ ಹಿತವಾಗಿ ಬೀಸುತಿರಲು..
ಆಗಸದ ಸ್ಪರ್ಶಕೆ ಭೂರಮೆಯು ತೋಯಲು ಸಿದ್ಧವಾಗಿರಲು
ಮೊದಮೊದಲ ಮಳೆಹನಿ ಭೂಮಿಯ ಚುಂಬಿಸಿದಾಗ
ನೀ ನೀಡಿದ ಆ ಚುಂಬನದಿಂದ ಮರೆತೇ ನನ್ನ ನಾ ಗೆಳತಿ

Comments