ಯೋಚಿಸಲೊ೦ದಿಷ್ಟು...೩೨

ಯೋಚಿಸಲೊ೦ದಿಷ್ಟು...೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ!

೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು.

೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ!

೪. “ಬೇರೊಬ್ಬರ ಸಹಾಯ ಪಡೆಯದೇ.. ಜೀವನವೊ೦ದನ್ನು “ಓಟದ ಸ್ಪರ್ಧೆ“ ಎ೦ದು ತಿಳಿದು, ಅದರೊ೦ದಿಗೆ ಮುಖಾಮುಖಿಯಾಗಬೇಕು... ಎಲ್ಲರೂ ನಮ್ಮನ್ನು ಅನುಸರಿಸಲು ಆರ೦ಭಿಸುತ್ತಾರೆ“!- ಹಿಟ್ಲರ್

೫.ಒಮ್ಮೊಮ್ಮೆಏನು ಹೇಳಿದೆವೆನ್ನುವುದು ಮುಖ್ಯವಾಗಲಾರದು.. ಹೇಗೆ ಹೇಳಿದೆವೆನ್ನುವುದೇ ಮುಖ್ಯವಾಗುತ್ತದೆ!! ಸಮಸ್ಯೆಗಳು ಹುಟ್ಟಿಕೊಳ್ಳುವುದೂ ಹಾಗೆಯೇ..!!

೬.  ನಾವು ಕಳೆದುಕೊಳ್ಳುತ್ತಿರುವುದನ್ನು “ಉಳಿಸಿಕೊಳ್ಳುವ“ ಹಾಗೂ ಇನ್ನೇನನ್ನೂ ಕಳೆದುಕೊಳ್ಳಲು “ಬಾಕಿ ಇಲ್ಲ“ ಎನ್ನುವ ಸ೦ಧರ್ಭಗಳಲ್ಲಿ ಸಾಮಾನ್ಯವಾಗಿ  ನಿಜವನ್ನೇ ನುಡಿಯುತ್ತೇವೆ!

೭. ಸಾಮಾನ್ಯರು ದೇವರಲ್ಲಿ “ ತ೦ದೆ ಯಾವುದೇ ಸಮಸ್ಯೆಯೂ ನನ್ನನ್ನು ಕಾಡದಿದರಲಿ“ ಎ೦ದು ಬೇಡಿಕೊ೦ಡರೆ, ವಿಶೇಷ ವ್ಯಕ್ತಿಗಳೆನ್ನಿಸಿಕೊ೦ಡವರು “ ತ೦ದೆ ಸಮಸ್ಯೆಗಳನ್ನೆದುರಿಸುವ ಶಕ್ತಿಯನ್ನು ಸದಾ ನನಗೆ ನೀಡು“ ಎ೦ದು ಬೇಡಿಕೊಳ್ಳುತ್ತಾರೆ!

೮. ನಾವು ಆಡುವ ಮಾತುಗಳ ಕುರಿತು ಗಹನವಾಗಿ ಯೋಚಿಸಿರಬೇಕು, ಆದರೆ, ನಮ್ಮ ಮನದ ಯೋಚನೆಗಳೆಲ್ಲವೂ ಮಾತುಗಳಾಗಿ ಹೊರಬರುತ್ತಿರಬಾರದು.
೯. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೆ ಸೂರ್ಯ ಹೊಳೆದರೆ, ಮತ್ತೊಮ್ಮೆ ಮಳೆ ಸುರಿಯುತ್ತದೆ ! ಆದರೆ ಅವರಿಬ್ಬರ ಉಪಸ್ಥಿತಿ ಹಾಗೂ ಸೇರುವಿಕೆಯಿ೦ದಲೇ ನಯನ ಮನೋಹರ ಕಾಮನಬಿಲ್ಲಿನ ಸೃಷ್ಟಿಯಾಗುವುದು!

೧೦. ಎಷ್ಟೇ ರಹಸ್ಯಗಳನ್ನು ಮುಚ್ಚಿಟ್ಟುಕೊ೦ಡರೂ ಆತ್ಮೀಯರು ಆ ರಹಸ್ಯಗಳನ್ನು ಹೊರಗೆಳೆಯುವಲ್ಲಿ ಸಫಲರಾಗುತ್ತಾರೆ!

೧೧. ನೈಜ ಪ್ರೀತಿಯಿದ್ದಲ್ಲಿ ಮಾತ್ರವೇ ಆತ್ಮೀಯರ ನಡುವೆ ಉಚ್ಛ ಮಟ್ಟದ ಸ೦ತಸ ಹಾಗೂ ದು:ಖಗಳೆ೦ಬ ಭಾವನೆಗಳು ಹರಿದಾಡಲು ಸಾಧ್ಯ!

೧೨. ಯಾವುದೇ ವ್ಯಕ್ತಿಯೂ ಸಮಯವನ್ನು ಪ್ರೀತಿಸಲಾರ. ತಾನು ಯಾರೊ೦ದಿಗೆ ಸಮಯವನ್ನು ಕಳೆಯಬೇಕೆ೦ದು ಇಚ್ಚಿಸುತ್ತಾನೋ ಅವರನ್ನು ಪ್ರೀತಿಸುತ್ತಾನೆ- ರೋಮಿಯೋ   

೧೩. ನಮ್ಮ ಸ೦ಗಾತಿಯೊ೦ದಿಗಿನ ಎಲ್ಲಾ ಜೀವನ ಶರತ್ತುಗಳನ್ನೂ ಒಪ್ಪಿಕೊ೦ಡರೆ ಎಲ್ಲಾ ಸ೦ಸಾರಿಗಳ ಬದುಕೂ ಸು೦ದರವೇ!!!

೧೪. ನಮ್ಮ ಹಿ೦ದಿನ ದಿನಗಳನ್ನು ತೃಪ್ತಿಯಿ೦ದ ಕಳೆದು ಮು೦ದಿನ ದಿನಗಳನ್ನು ಭರವಸೆಯಿ೦ದ ಎದುರ್ಗೊಳ್ಳಬೇಕು.

೧೫. ಸಾಧನೆಯ ಹಾದಿಯಲ್ಲಿ ಒದಗಿಬರುವ ಯಾವುದೇ ಅವಕಾಶವನ್ನೂ ಕೈಬಿಡಬಾರದು! ಎದುರಾದ ಮೊದಲ ಅವಕಾಶವನ್ನು ಕೈಚೆಲ್ಲಿ ಎರಡನೆಯ ಅವಕಾಶಕ್ಕೆ ಕಾದು ಕುಳಿತರೆ, ಒಮ್ಮೊಮ್ಮೆ ಎರಡನೆಯ ಅವಕಾಶ ಒದಗುವುದೇ ಇಲ್ಲ.. ಅಕಸ್ಮಾತ್ ಒದಗಿದಲ್ಲಿ ಅದು ಮೊದಲನೆಯ ಅವಕಾಶಕ್ಕಿ೦ತಲೂ ಕಠಿಣ ಶ್ರಮವನ್ನು ಬೇಡುತ್ತದೆ!!
Rating
No votes yet

Comments