ಉಬುಂಟು ಹೊಸ ಆವೃತ್ತಿಗಾಗಿ ಪ್ರಯತ್ನ ; ಅದೇ ಹಳೆಯ ಗೋಳು

ಉಬುಂಟು ಹೊಸ ಆವೃತ್ತಿಗಾಗಿ ಪ್ರಯತ್ನ ; ಅದೇ ಹಳೆಯ ಗೋಳು

ನಾನು ವಿಂಡೋಸ್ ತರಹದ ಆದರೆ  ಉಚಿತ ಉಬುಂಟು ಲೀನಕ್ಸನ್ನು  ಮೂರ್ನಾಲ್ಕು ವರ್ಷಗಳಿಂದ  ಬಳಸುತ್ತಿದ್ದೇನಷ್ಟೆ .  ಪ್ರತಿ ಆರು  ತಿಂಗಳಿಗೆ  ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ್ಳಬಹುದು. ಬಹುಶಃ ಅದೇ ಸುಲಭ ವಿಧಾನ. ಹಿಂದೊಮ್ಮೆ ಈ ತರಹ ಅಪ್ಡೇಟ್ ಮಾಡಿಕೊಳ್ಳುವಾಗ ಅನುಭವಿಸಿದ ತೊಂದರೆಯನ್ನು http://sampada.net/blog/shreekantmishrikoti/06/06/2009/21166 ಬ್ಲಾಗ್ ನಲ್ಲಿ ಬರೆದಿದ್ದೆನಷ್ಟೆ.

 

ಈ ಸಲ ೧೦.೧೦ ಆವೃತ್ತಿಯಿಂದ ೧೧.೦೪ ಕೆ ಅಪ್ಡೇಟ್ ಮಾಡುವಾಗ ಅಂಥದೇ  ತೊಂದರೆ ಮರುಕಳಿಸಿದೆ. ನಿಜ ಹೇಳಬೇಕೆಂದರೆ ಹೊಸ ಆವೃತ್ತಿಗಳ ಅಗತ್ಯವೇನೂ ಇರಲಿಲ್ಲ. ನನ್ನ ಮಟ್ಟದ ಬಳಕೆಗೆ ಯಾವುದೇ ಹಳೇ ಆವೃತ್ತಿಯೇ ನಡೆದೀತು. ಅದೇನೋ ಅಂತಾರಲ್ಲ - ಕೆಲಸವಿಲ್ಲದ ಬಡಗಿ ..... ಅಥವಾ ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರು ಅಂತ . ಸುಮ್ಮನೆ ಬೇಡದ ಅಪ್ಡೇಟ್ ಮಾಡಲು ಹೋಗಿ .  ಎಂಟು ಗಂಟೆಗಳಷ್ಟು ಕಾಲ ಡೌನ್ಲೋಡ್ ಮಾಡಿದೆ.  ಈಗ ಅದು ಬೂಟ್ ಆಗುತ್ತಿಲ್ಲ. ಲಾಗಿನ್ ಬರುತ್ತಿಲ್ಲ. ಅಲ್ಲೇ ನಿಂತು ಬೊಇಡುತ್ತಿದೆ.   ರಿಕವರಿ ಮೋಡ್ ಬರುತ್ತದೆ. ಅಲ್ಲಿನ ಆಯ್ಕೆ ಗಳನ್ನು ಬಳಸಿ ನೋಡಿದೆ. ರೆಸ್ಯೂಮ್  ನಾರ್ಮಲ್ ಸ್ಟಾರ್ಟಪ್ ಆಯ್ಕೆ ಕೊಟ್ಟರೆ ಅದೇ ಕಥೆ . ಚೆಕಿಂಗ್ ಬ್ಯಾಟರಿ ಅನ್ನುವಲ್ಲಿ ನಿಂತುಕೊಳ್ಳುತ್ತದೆ.   ಒಂದೆರಡು ಬಾರಿ ಹಾರ್ಡ್ ಬೂಟ್ ಅಂದರೆ ಸ್ವಿಚ್  ಆಫ್  ಮಾಡಿ ಶುರು ಮಾಡಿದೆ . ಹಾಗೆ ನೋಡಿದರೆ ಈ ತರಹ ಮಾಡುವುದು ತಪ್ಪು. ಸದ್ಯ ವಿಂಡೋಸ್ ಕೆಲಸ ಮಾಡುತ್ತಿದೆ. ಅಲ್ಲೇ ಈ ಬ್ಲಾಗ್ ಬರೆಯುತ್ತಿದ್ದೇನಲ್ಲ?  ವಿಂಡೊಸ್ ನಲ್ಲಿ ಗೂಗಲಿಸಿ ಉಬುಂಟು ರಿಕವರಿ ಮೋಡ್ ನಿಂದ ಸರಿಯಾದ ರೀತಿಯಲ್ಲಿ ಹೇಗೆ ಕಂಪ್ಯೂಟರ್ ನಿಲ್ಲಿಸುವುದು ಅಂತ ತಿಳಕೊಂಡೆ. 

 

ಹಳೇ ಆವೃತ್ತಿಗಳ ಸೀಡಿಗಳನ್ನು ಕಚೇರಿ ಯಲ್ಲಿ ಇಟ್ಟಿದ್ದೀನಿ. ಇವತ್ತು ರವಿವಾರ. ನಾಳೆ ಅವನ್ನು ತಂದು ಹಳೇ ಲೈವ್ ಸೀಡೀಯಿಂದ  ಉಬುಂಟು ಶುರು ಮಾಡಿ ಮೊದಲಿಗೆ ಅಲ್ಲಿನ ಕಡತಗಳ ಕಾಪಿಯನ್ನು ವಿಂಡೋಸ್ ಪಾರ್ಟಿಶನ್ ನಲ್ಲಿ ಇಟ್ಟುಕೊಳ್ಳಬೇಕು. ಆಮೇಲೆ ಹಿಂದಿನ ಆವೃತ್ತಿಯನ್ನೇ ಹಾಕಿಕೊಂಡು ಇರಬಹುದು. ಹೋದ ಸಲ ಈ ಸಮಸ್ಯೆ ಬಗ್ಗೆ ಬರೆದಾಗ ಅನೇಕರು ಕೊಟ್ಟ ಸಲಹೆಗಳು ಈಗ ಉಪಯೋಗಕ್ಕೆ ಖಂಡಿತ ಬರುತ್ತವೆ.  ಅಲ್ಲಿ ಪ್ರತಿಕ್ರಿಯಿಸಿದ ಕುಮಾರ್ , ಶ್ರೀನಿಧಿ, ಶ್ರೀನಿವಾಸ ಬಂಗೋಡಿ ಮತ್ತು amg ರವರಿಗೂ ಇಲ್ಲಿ  ಇನ್ನೊಮ್ಮೆ ಧನ್ಯವಾದಗಳು .

 

Rating
No votes yet

Comments