ಭಾಷಾಭಿಮಾನ ಎಂದರೆ ಇದೇನಾ?

ಭಾಷಾಭಿಮಾನ ಎಂದರೆ ಇದೇನಾ?

ನನ್ನ ಸಹೋದ್ಯೋಗಿ ಒಬ್ಬನಿದ್ದಾನೆ. ಆತ ಕನ್ನಡ ಹಾಗೂ ಡಾ.ರಾಜ್ ವೀರಾಭಿಮಾನಿ. ಆತನ ಭಾಷಾಭಿಮಾನ ಹೇಗಿದೆಯಂದರೆ ಆತ ಅಷ್ಟೇನೂ ಓದಿಕೊಂಡಿಲ್ಲ. ಆತನಿಗೆ ಸರಿಯಾಗಿ ಕನ್ನಡ ಪದಜೋಡನೆಯೂ ಬರುವುದಿಲ್ಲ. ಆದರೆ ಆತನ ಮೈಮನಸ್ಸು ಎಲ್ಲ ಕನ್ನಡ ತುಂಬಿದೆ. ಆತ ಇದುವರೆಗೂ ಕನ್ನಡ, ಆಂಗ್ಲ ಮತ್ತು ಹಿಂದಿ ಸಿನಿಮಾಗಳನ್ನು ಬಿಟ್ಟು ಬೇರೆ ಭಾಷೆ ಸಿನಿಮಾ ನೋಡಿಲ್ಲ!!!. ಆತ ತಿರುಪತಿ, ಮಂತ್ರಾಲಯ ಪ್ರಸಾದ ತಿನ್ನುವುದಿಲ್ಲ. ಏಕೆಂದು ಕೇಳಿದರೆ ಅದು ಆಂಧ್ರದ ದೇವರು ಅದಕ್ಕೆ ತಿನ್ನುವುದಿಲ್ಲ ಎನ್ನುತ್ತಾನೆ. ಬೇರೆ ಭಾಶಿಕರೊಡನೆ ಕನ್ನಡದಲ್ಲೇ ಮಾತಾಡುತ್ತಾನೆ. ಆತನ ಪ್ರಕಾರ ಕರ್ನಾಟಕ ಭಾರತದಲ್ಲಿಲ್ಲ. ಭಾರತವೇ ಕರ್ನಾಟಕದಲ್ಲಿದೆ ಎನ್ನುತ್ತಾನೆ. ಮೊದಲು ಭಾರತೀಯನಾಗು ಆಮೇಲೆ ಕನ್ನಡಿಗ ಎಂದರೆ ಇಲ್ಲ ಮೊದಲು ನಾನು ಕನ್ನಡಿಗ ಎನ್ನುತ್ತಾನೆ.

ಇದನ್ನು ಭಾಷಾಭಿಮಾನ ಎನ್ನುವುದೋ? ಏನನ್ನುವುದು?

Rating
No votes yet

Comments