Skip to main content
Test
ಕವನ
ಚಂದಮಾಮ
ನೀ ನೋಡಲೆಷ್ಟು ಚಂದ
ಆದರೇಕೆ ಸಣ್ಣಗಾಗುವೆ ದಿನದಿನ
ಇಲ್ಲವಾಗುವೆ ಒಂದುದಿನ
ಮತ್ತೆ ಮೂಡಿಬರುವೆ
ದೊಡ್ಡದಾಗುವೆ ಒಂದು ದಿನ
ನೀ ಇರುವೆ ಬಲುದೂರ
ಮನಕೆ ತೀರ ಹತ್ತಿರ
ಸಂಭ್ರಮಿಸುವೆವು ನಿನ್ನ
ಕಡಲ ತೀರದಿ
ಬೆಳದಿಂಗಳೂಟದಿ
ತಾರೆಗಳ ಜತೆಗೂಡಿ
ಆಡಲಿದೆ ನಿನಗೆ
ಆಕಾಶವೆ ಅಂಗಳ
ನನಗೋ
ತಾರಸಿಯೆ ಆಗಿದೆ
ಆಟದಂಗಳ