ಒಸಾಮ ಬಿನ್ ಲಾಡನ್ ಇನ್ನಿಲ್ಲ !!!
ಒಸಾಮ ಬಿನ್ ಲಾಡನ್ ಇನ್ನಿಲ್ಲ !!!
ಈ ದಿನ ಬೆಳಗ್ಗೆ ಟಿ.ವಿ. ವಾಹಿನಿಗಳು ಒಸಮಾಬಿನ್ ಲಾಡನ್ ಎಂಬ ಭಯೋತ್ಪಾದಕನ ಅಂತ್ಯವನ್ನು ಪ್ರಸಾರ ಮಾಡುತ್ತಿದ್ದವು. ಪಾಕಿಸ್ತಾನದ ಇಸ್ಲಾಮಭಾದ್ ಹೊರವಲಯದಲ್ಲಿ ಅಡಗಿದ್ದ ಲಾಡನ್ , ಅಮೇರಿಕದ ಸಿಐಎ ಸೈನಿಕರ ದಾಳಿಗೆ ಸಿಲುಕಿ ಮೃತನಾಗಿದ್ದಾನೆ, ಅಮೇರಿಕ ಅಧ್ಯಕ್ಷರ ಭಾಷಣದ ನೇರ ಪ್ರಸಾರದಲ್ಲಿ ಅಧ್ಯಕ್ಷ ಭಾರಕ್ ಒಭಾಮರವರು ಇದನ್ನು ಅದಿಕೃತವಾಗಿ ದೃಡಪಡಿಸಿ ಲಾಡನ್ ಶವ ಅಮೇರಿಕದ ವಶದಲ್ಲಿದೆ ಎಂದು ತಿಳಿಸಿರುತ್ತಾರೆ. ಅಮೇರಿಕನ್ನರೆಲ್ಲ ಸಂಭ್ರಮ ಆಚರಿಸುತ್ತಿದ್ದಾರೆ. ಅಧ್ಯಕ್ಷರು ತಮ್ಮ ಭಾಷಣದಲ್ಲಿ "ಇದು ಇಸ್ಮಾಂ ವಿರುದ್ದ ಹೋರಾಟವಲ್ಲ, ಲಾಡನ್ ಮುಸ್ಲಿಂ ನಾಯಕನಲ್ಲ ರಕ್ತಪಿಪಾಸು ಭಯೋತ್ಪಾದಕ" ಎಂದು ಸ್ವಷ್ಟಪಡಿಸುತ್ತಿರುವುದು ಯಾರನ್ನು ಸಮಾದಾನಪಡಿಸಲು ಎಂದು ತಿಳಿಯುತ್ತಿಲ್ಲ. ಅಲ್ಲದೆ ಈ ಆಲ್ ಖೈದಾ ನಾಯಕನನ್ನು ತನ್ನ ಕಣ್ಣು ರೆಪ್ಪೆಗಳಿಲ್ಲಿಯೆ ಮುಚ್ಚಿಟ್ಟಿಕೊಂಡು,ಲಾಡನ್ ಪಾಕಿಸ್ತಾದದಲ್ಲಿಲ್ಲ ಅವನು ಎಲ್ಲಿದಾನೊ ಗೊತ್ತಿಲ್ಲ ಎಂದು ನಾಟಕವಾಡುತ್ತಿದ್ದ ಪಾಕಿಸ್ತಾನದ ನಾಯಕರು ಈಗ ಲಾಡನ್ ಇಸ್ಲಾಮಬಾದ್ ನಲ್ಲಿಯೆ ಬೇಟೆಯಾಗಿರುವದಕ್ಕೆ ಏನೊ ಹೇಳುತ್ತಾರೆ ತಿಳಿದಿಲ್ಲ. ಅಧ್ಯಕ್ಷ ಒಬಾಮರು ಈ ಬಗ್ಗೆ ತಮ್ಮ ಬಾಷಣದಲ್ಲಿ ’ಚ’ಕಾರವನ್ನು ಎತ್ತಲಿಲ್ಲ.
*********************************************************************************
ಗೊತ್ತಿಲ್ಲ: ಟಿ.ವಿ.೯ ನಲ್ಲಿ ಪ್ರಸಾರವಾಗುತ್ತಿದ್ದ ಲಾಡನ್ ಮರಣದ ಸುದ್ದಿಯಲ್ಲಿ , ಚಾನಲ್ ನ ಸುದ್ದಿ ಹೇಳುವವರು ಪದೆ ಪದೆ ಆಲ್ ಖೈದಾ ನಾಯಕ ಲಾಡನ್ ರವರನ್ನು ಕೊಲ್ಲಲಾಗಿದೆ ಎಂದು, ಒಬ್ಬ ಭಯೋತ್ಪಾದಕನಿಕೆ ಅತಿಯಾದ ಗೌರವ ಬಹುವಚನ ಬಳಿಸಿ ಹೇಳುತ್ತಿದ್ದುದ್ದು ಏಕೆಂದು ಅರ್ಥವಾಗಲಿಲ್ಲ.
Comments
ಉ: ಒಸಾಮ ಬಿನ್ ಲಾಡನ್ ಇನ್ನಿಲ್ಲ !!!
ಉ: ಒಸಾಮ ಬಿನ್ ಲಾಡನ್ ಇನ್ನಿಲ್ಲ !!!