ಈ ಸಂಜೆ

ಈ ಸಂಜೆ

ಕವನ
ಈ ಸುಂದರ ಸಂಜೆಯಲ್ಲಿ
ಕಾಡಿದೆ ನಿನ್ನ ನೆನಪು.
ಸ್ವಾತಿ ಮುತ್ತಿನ ಹಾಗೆ 
ಧರೆಗಿಳಿಯುತ್ತಿರುವ ಮಳೆ ಹನಿಗಳಲ್ಲಿ
ನಿನ್ನ ಚಿಟ-ಪಟ ಮಾತುಗಳ ತನನಂ.
ಹುಡುಕುತ್ತಿವೆ ನನ್ನೀ ನಯನಗಳು
ನಿನ್ನ ಆಗಮನದ ಸೂಚನೆಯನ್ನು.
ಆಲಿಸುತ್ತಿವೆ ಕರ್ಣಗಳು ನಿನ್ನ 
ಹೆಜ್ಜೆಯ ನಾದವನ್ನು.
ಕಾತರಿಸುತ್ತಿದೆ ಈ ಮನಸು
ನಿನ್ನನ್ನು ಕಾಣಲು, ಸೇರಲು.
ವರುಣನ ಸಿಹಿ ಚುಂಬನಕ್ಕೆ ಕಾದ 
ಭೂರಮೆಯಂತೆ...
ಮಣ್ಣಲ್ಲಿ ಮಣ್ಣಾಗುವ ವರ್ಷದಂತೆ
ನನ್ನ ಉಸಿರಲ್ಲಿ ಉಸಿರಾಗಬಾರದೆ??