ಆ ಸ್ಪರ್ಶವು

ಆ ಸ್ಪರ್ಶವು

ಕವನ

ಕೊಂದೆ ಬಿಡುವುದು,ನಿನ್ನ ಆ ಸ್ಪರ್ಶವು,
ಹೇಳದೆ ಹೋಗುವೆ, ನಾ ಪ್ರೀತಿಯ ವಿಷಯವು

ಕಾಣದೆ ಕರಗುವೆ ನಾ ಮೋಡದ ಮರೆಯಲಿ,
ಮೆಲ್ಲಗೆ ಸುರಿಯುವೆ ನಾ ಪ್ರೀತಿಯ ಮಳೆಯಾಗಿ,

ಹನಿಯಾಗಿ ಬರುವೆ ನಿನ್ನ ಅನುರಾಗಕೆ,
ಕೆಂದಾವರೆ ಕೆನ್ನೆ ಸವರಿ, ಜಾರುವೇ ಮೆಲ್ಲಗೆ,

ಮಳೆಯಾಗಿ ಹನಿಯು ಹೇಳುತಿದೆ, ನನ್ನ ಪ್ರೀತಿಯ ಆಸೆಯ,
ಒಡಲ ಬರಿದಾಗಿಸಿ ಹುಡುಕುವೆ ನಿನ್ನಲ್ಲದೆ ಘಳಿಗೆಯ,

ಸದಿಯ ಒಡಲ ಸೇರಿ, ಸಾಗರದಲ್ಲಿ ಲೀನವಾಗುವೆ,
ಮರೆತು ನಿನ್ನ ನಾ ಹೋಗಿ ಉಪ್ಪಾಗಿ ನರಳುವೆ,

ಕಾಯುವೆ ಆತುರದಿ, ಬಿಸಿಲ ತಾಪಕೆ,
ಆವಿಯಾಗಿ ಹೋಗಿ, ಮತ್ತೆ ಮಳೆಯಾಗಿ ಸುರಿಯುದಕೆ