ದೂರಾದೆ ಏಕೆ ಒಲವೇ
ಕವನ
ದೂರಾದೆ ಏಕೆ ಒಲವೇ , ದೂರದೆ ಬದುಕುತಿರುವೇ
ನಿನ್ನೊಲುಮೆ ಮಾತು ಮಾಯೇ, ಸಣ್ಣ ದನಿಯಲಿ ಹೇಳುತಿರುವೇ,
ಮನದಂಗಳದ ತೋಟದಲ್ಲಿ, ನೀನಾದೆ ಹೂವಬಳ್ಳಿ
ಕಂಪ ಸೂಸಿ ಬೀರೂ!ತಿರುವೆ, ಒಲವಿನ ಹೂವನಗೆಯ,
ನಭದಲ್ಲಿನ ಚಂದ್ರ ಬಿಂದು, ಅಳುಕಿಲ್ಲದೆ ನಗುವ ಹಾಗೆ,
ಮಿತಿಯಿಲ್ಲದ ಮನದ ವೇಗ, ಕಡಿವಾಣ ಹಾಕುವೇ ಈಗ,
ಪ್ರೀತಿಯ ಬೆಸುಗೆ ನೋವ, ಅನುಭವಿಸುತಿರುವೆ ನಾನು ಈಗ,
ರೆಪ್ಪೆಯ ಕಣ್ಣೀರ ಬಿಂದು, ಜಾರುವ ಪರಿಯ ಹಾಗೆ
ಇದಿರಾದೆ ನೀನು ಇಂದು, ತವಕದಿ ನಾನು ಬೆಂದೆ ,
ತುಟಿಯ ಆ ಮುಗುಳುನಗೆಯ, ಬಯಸುತ ನಾನು ನಿಂದೆ,
ಇಳೆಯ ಧಾನ್ಯ ಬಿಂದು, ಮಳೆಗೆ ಚಿಗುರೊ ಹಾಗೆ.
ಕಾರ್ಮೋಡ ಕವಿದ ರೀತಿ, ಮನವೆನ್ನ ಮೌನ ಚಿತ್ತ
ಕನಸಿನ ಮುಗಿಲು ಗುಡುಗಿ, ನೆನಪಿನ ಮಳೆಯ ಸುರಿಸಿ,
ಹಸಿರಿಂದು ಆತುರದಿ ನೆನೆದು, ಚಿಗುರಾಗಿ ನಲಿದ ಹಾಗೆ
ಕನಸೆಂದು ನಾನು ತಿಳಿದೆ, ನೋವೆಲ್ಲಾ ಮರೆತೆ ಅಂದೆ,
ನೀ ಹೇಳಿದ ಕೊನೆಯ ಮಾತು, ಬಯಸದೆ ಗೀಚೀ ಹೋದೆ,
ಮರೆಯದ ನೆನಪ ಬಿಂದು, ಗುಲಗಂಜಿಯ ಚುಕ್ಕಿ ಹಾಗೆ.