ನಗೆಯ ದೈವ

ನಗೆಯ ದೈವ

ಕವನ

ಮರೆತು ಕುಂತನೇ ನಗೆಯ ದೈವ,
ತುಟಿಯ ಅಂಚಲಿ ಮಾತ ಹೇಳುವ,
ನೋಡು ನೋಡುತ ಮೈಯ ಮರೆಸುತ,
ಏನು ಹೇಳದೇ ಮನವ ಕಾಡುವ !!!

ಇಳೆಯ ತಣಿಸಲು ಬರುವ ಮಳೆಯು
ಇರುಳ ಅಳಿಸಲು ಬರುವ ಶಶಿಯು
ಅಪ್ಪಿಹಿಡಿಯುವ ಇನಿಯ ಆತುರ
ಇದಕೆ ನೀನೇನಾ ,,,, ಉತ್ತರಾ? ಉತ್ತರಾ?

ಪ್ರೀತಿಯೆಂಬುದೇ ಅದರ ಭಾಷೆಯಾ?
ಅಳಕು ಇಲ್ಲದ ಅಧರ ಕಾತರಾ?
ನಲಿವು ಹೇಳುವ ಸೂಚ್ಯ ಇದುವೇಯಾ ?
ಹೂವ ಬೀರುವ ಮುಗುದ ನೋಟವಾ?

ಎಲ್ಲಾ ನೋವನು ಹಿಂಡಿ ಎಸೆಯುವುದು
ಇನಿದು ಭಾವವ ಬಿತ್ತಿ ಬೆಳೆಸುವುದು
ವ್ಯಥೆಯು-ಬಾಧೆಯ ಮರೆಸಿ ಹರಿಸುವುದು
ನಗುವೇ ! ನೀನು ವದನ ಆಸ್ತಿಯು
ಮರೆತು ಕುಂತೆನೇ ನಗೆಯ ದೈವ