ಸ್ನಾನ
ಕವನ
ಹಂಡೆಯಲ್ಲಿ ನೀರನ್ನು ಕಾಸಿಕೊಳ್ಳಿ
ಬುನ್ಡೆಯಲಿ ಸ್ವಚ್ಚತೆಯ ತುಂಬಿಕೊಳ್ಳಿ
ಸಿದ್ದವಾಗಿರಲಿ ಬಚ್ಚಲಲಿ ಎಣ್ಣೆ ಸೀಗೆ
ಮುಚ್ಚು ಮರೆ ಇಲ್ಲದೆಯೇ ಎರೆದುಕೊಳ್ಳಿ
ತೊಳೆಯುತ್ತಲಿರಲು ಹಬೆಯ ಜಲವು
ಕಳೆಯುತ್ತಲಿರಲು ಮೈಮನದ ಮಲವು
ಅಂಗಾಂಗವೆಲ್ಲಾ ಹರಿದು ಕಸುವು
ಗಂಗೇಚ ಯಮುನೇ ಹೇಳಿಕೊಳ್ಳಿ
ಗಂಧವಾಗಲೊಂದಿಷ್ಟು ಹೂವು
ಪತ್ರೆಯನು ಜಜ್ಜಿ ಹಚ್ಚಿಕೊಳ್ಳಿ
ರಂಧ್ರಗಳೆಲ್ಲವನು ಮುಚ್ಚಿ ಒಮ್ಮೆ
ಘಮ್ಮೆಂಬ ಉಸಿರನ್ನು ಎಳೆದುಕೊಳ್ಳಿ
ದಿನಕೊಮ್ಮೆಯಾದರೂ ಹೀಗೆ ಮೀಯುತಿರಬೇಕು
ತಿಮಿರು ಅಂತದ ಹಾಗೆ ಕಾಯುತಿರಬೇಕು
Comments
ಉ: ಸ್ನಾನ
In reply to ಉ: ಸ್ನಾನ by prasannakulkarni
ಉ: ಸ್ನಾನ