ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ಕವನ

ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು)

ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು

ಮನಸಿನ ಮಾತು ಹೇಳಲೇನು ಮುದ್ದಾದ ಹೆಣ್ಣು ನೀನು

ಜಂಭದ ಹೆಣ್ಣು ನೀನು, ನಾ ನಿನಗೆ ಜೋಡಿ ಅಲ್ಲವೇನು...


ಚೆಲುವ ಒಂದು ಹೇಳ್ತೀನಿ ಇಲ್ಲ ಅಂದೇ ಕೇಳ್ತೀಯ

ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ?

ನಿಜವಾದ ಗಂಡೇ ಆದ್ರೆ ನೀನು ಒಂದ್ಕೇಜಿ ಚಿನ್ನ ಕೊಡ್ಸು

ಒಂದ್ಕೇಜಿ ಮುತ್ತು ಕೊಡ್ಸು ಆಮೇಲೆ ಪ್ರೀತಿ ಅಲ್ಲವೇನು...

 

ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೇ ಕೊಡ್ಬೇಕ..ಅಲ್ವ ಮತ್ತೆ ಕೊಡಬೇಕಪ್ಪ

ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ಬೇಕ..ಹೌದು ಮತ್ತೆ ಕಾಯ್ಬೇಕಪ್ಪ..

ಪ್ರೀತಿಗಾಗಿ ಇಷ್ಟೆಲ್ಲಾ ಮಾಡೋದಿಲ್ಲಪ್ಪ..ಹೌದ ವೀರ ಜೋಕುಮಾರ ಮಾತು ನಿಜವೇನ...

 


ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು

 

ಚಿನ್ನ ಕೊಡಿಸ್ದೆ ಇರೋರಿಗೆ ಹೇಗೆ ಮನಸು ನೀಡಲೋ..ಹೌದ ನಿಂಗೆ ಕೊಬ್ಬು ಕಣೆ

ಆಸ್ತಿ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ..ಅಯ್ಯಯ್ಯೋ ಹೌದ ನಿನಗೇನ್ ಬಂತೆ..

ಆಸ್ತಿವಂತ ಸ್ಥಿತಿವಂತ ಪ್ರೇಮಿ ನನ್ನವನು...ನಿನ್ನ ಹಾಗೆ ಬಡವನು ಅಲ್ಲ ನನ್ನ ಮನ್ಮಥನು

 


ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು


ನಿಜವಾದ ಗಂಡೇ ಆದ್ರೆ ನೀನು ಒಂದ್ಕೇಜಿ ಚಿನ್ನ ಕೊಡ್ಸು

ಒಂದ್ಕೇಜಿ ಮುತ್ತು ಕೊಡ್ಸು ಆಮೇಲೆ ಪ್ರೀತಿ ಅಲ್ಲವೇನು

Comments