ನೆನಪಾದಾಗ… ಮನನೊಂದಾಗ…!

ನೆನಪಾದಾಗ… ಮನನೊಂದಾಗ…!

ನೆನಪಾದಾಗ… ಮನನೊಂದಾಗ…!

(ಭಾವಾನುವಾದದ ಪ್ರಯತ್ನ)


ನೆನಪಾಗುತಿಹುದು
ನೆನಪಾಗುತಿಹುದು
ನಿನ್ನ ನೆನಪಾಗುತಿಹುದು
ನಿನ್ನ ನೆನಪಾಗುತಿಹುದು
ನೆನಪಾದಾಗ
ಮನನೊಂದಾಗ
ಪ್ರಾಣವೇ ಹೋದಂತಿಹುದು

||ನೆನಪಾಗುತಿಹುದು
ನಿನ್ನ ನೆನಪಾಗುತಿಹುದು||

ಮೊದಲರಿತಿರಲೇ ಇಲ್ಲ
ನಿನ್ನ ಪ್ರೀತಿಯಿಂದರಿತೆ ನಾನೆಲ್ಲಾ
ಪ್ರೀತಿಯ ಹುಚ್ಚಲೀ ಮನಸ್ಸು
ನನ್ನ ಬದುಕಲು ಬಿಡುವುದೇ ಇಲ್ಲಾ
ಹೇಗೋ ಏನೋ ನನ್ನೀ ಉಸಿರು
ಇನ್ನೂ ಆಡುತಿಹುದು

||ನೆನಪಾಗುತಿಹುದು
ನಿನ್ನ ನೆನಪಾಗುತಿಹುದು||

ದಿನ ಕಳೆದಂತೇ ವಿರಹ
ನನ್ನ ಉಸಿರುಗಟ್ಟಿಸುತಿಹುದು
ನನ್ನದೆಯಾ ಬಡಿತವಿದು
ನನ್ನ ವೈರಿಯಂತಾಗಿಹುದು
ಕ್ಷಣ ಪ್ರತಿಕ್ಷಣವೂ
ಹಂಗಿಸುವಂತೆ
ನನ್ನ  ಕಾಡುತಿಹುದು

||ನೆನಪಾಗುತಿಹುದು
ನಿನ್ನ ನೆನಪಾಗುತಿಹುದು||

ಈ ಸುಂದರ ಋತು ಹಾಗೂ
ಹೂದೋಟ ಇಂದು ಮರುಗಿದೆ
ನನ್ನೀ ವ್ಯಥೆಯಾ ಕೇಳಿ
ಪ್ರತೀ ಹೂವೂ ಜೊತೆಗೆ ಅತ್ತಿದೆ
ನನ್ನ ಜೊತೆಗೆ ಪ್ರಕೃತಿ ಕೂಡ
ಅಶ್ರುಧಾರೆ ಹರಿಸುತಿದೆ

||ನೆನಪಾಗುತಿಹುದು
ನಿನ್ನ ನೆನಪಾಗುತಿಹುದು||

 

 
ಮೂಲಗೀತೆ:

ಚಿತ್ರ: ಲವ್ ಸ್ಟೋರಿ
ಗಾಯಕರು: ಅಮಿತ್  ಕುಮಾರ್ ಹಾಗೂ ಲತಾ ಮಂಗೇಶ್ಕರ್

–ಹುಡುಗಿ–
ಯಾದ್  ಆ ರಹೀ ಹೈ

–ಹುಡುಗ–
ಯಾದ್  ಆ ರಹೀ ಹೈ

–ಹುಡುಗಿ–
ತೇರೀ ಯಾದ್  ಆ ರಹೀ ಹೈ, ತೇರೀ ಯಾದ್  ಆ ರಹೀ ಹೈ
ಯಾದ್ ಆನೇ ಸೇ, ತೇರೇ ಜಾನೇ ಸೆ
ಜಾನ್ ಜಾ ರಹೀ ಹೈ
ಯಾದ್  ಆ ರಹೀ ಹೈ, ತೇರೀ ಯಾದ್  ಆ ರಹೀ ಹೈ

ಪೆಹ್‍ಲೇ ಎ ನಾ ಜಾನಾ
ತೇರೇ ಬಾದ್ ಎ ಜಾನಾ ಪ್ಯಾರ್ ಮೇ
ಜೀನಾ ಮುಶ್ಕಿಲ್ ಕರ್ ದೇಗಾ
ಎ ದಿಲ್ ದೀವಾನಾ ಪ್ಯಾರ್ ಮೇ
ಜಾನೇ ಕೈಸೇ ಸಾಂಸ್ ಎ ಐಸೇ
ಆ ಜಾ ರಹೀ ಹೈ
ಯಾದ್  ಆ ರಹೀ ಹೈ, ತೇರೀ ಯಾದ್  ಆ ರಹೀ ಹೈ

–ಹುಡುಗ–
ಬನ್‍ ತೇ ಬನ್‍ ತೇ ದುಲ್ಹನ್
ಪ್ರೀತ್  ಹಮಾರೀ ಉಲ್ಝನ್ ಬನ್ ಗಯೀ
ಮೇರೇ ದಿಲ್ ಕೀ ದಢ್‍ಕನ್
ಮೇರೀ ಜಾನ್ ಕೀ ದುಶ್ಮನ್ ಬನ್ ಗಯೀ
ಕುಛ್ ಕೆಹ್ ಕೆಹ್ ಕೇ, ಮುಝೆ ರೆಹ್ ರೆಹ್ ಕೇ
ತಡ್‍ಪಾ ರಹೀ ಹೈ

ಯಾದ್  ಆ ರಹೀ ಹೈ, ತೇರೀ ಯಾದ್  ಆ ರಹೀ ಹೈ

–ಹುಡುಗಿ–
ಎ ಋತ್ ಕೀ ರಂಗ್ ರಲಿಯಾಂ
ಎ ಫೂಲೋಂ ಕೀ ಗಲಿಯಾಂ ರೋ ಪಢೀ

–ಹುಡುಗ–
ಮೇರಾ ಹಾಲ್ ಸುನಾ ತೋ
ಮೇರೇ ಸಾತ್ ಎ ಕಲಿಯಾಂ ರೋ ಪಢೀ

–ಹುಡುಗಿ–
ಏಕ್ ನಹೀಂ ತು ದುನಿಯಾ ಆಂಸೂ
ಬರ‍್ಸಾ ರಹೀ ಹೈ
ಯಾದ್  ಆ ರಹೀ ಹೈ

–ಹುಡುಗ–
ತೇರೀ ಯಾದ್  ಆ ರಹೀ ಹೈ

–ಹುಡುಗಿ–
ಯಾದ್ ಆನೇ ಸೇ, ತೇರೇ ಜಾನೇ ಸೇ
ಜಾನ್ ಜಾ ರಹೀ ಹೈ

–ಈರ್ವರೂ–
ಯಾದ್  ಆ ರಹೀ ಹೈ, ತೇರೀ ಯಾದ್  ಆ ರಹೀ ಹೈ

Rating
No votes yet

Comments