ಏಕೆಂದರೆ,ನಾನು ಕನ್ನಡಿಗ!
ಕವನ
ಬೇಲೂರಿನಲಿ ಶಿಲೆ ಕಲೆಯಾಗಿ ಅರಳಿದ ಬಗೆಯ ಕಂಡು
ವಿದೇಶಿಗನು ಅಚ್ಚರಿಗೊಂಡು ಹೊಗಳಲು,ನನ್ನ ಮನ ಹೆಮ್ಮೆಯಿಂದ ಬೀಗಿದಾದರೂ ಏಕೆ?
ಅನ್ಯಭಾಷೆಯ ಟಿವಿವಾಹಿನಿಯಲ್ಲಿ,ಕನ್ನಡದ ಹಾಡೊಂದ ಕೇಳಿ,ಮೆಚ್ಚಿ ಚಪ್ಪಾಳೆ ತಟ್ಟಲು ಹೆಮ್ಮೆ ಎನಿಸಿದ್ದು ಏಕೆ?
ಹಾಳುಹಂಪೆಯ ಶೋಕಗೀತೆಯ ಕೇಳಲು ಕಣ್ಣು ತೇವಗೊಂಡಿದಾದರೂ ಯಾಕೆ?
ನಮ್ಮನಾಳುವ ಮಂದಿ, ಜನಸೇವೆಯ ಹೆಸರಿನಲ್ಲಿ ನೆಲ ಜಲವ ದೋಚಲು,ನನ್ನ ಅಸಹಾಯಕತೆಗೆ ನಾನು ಮರುಗಿದಾದರೂ ಏಕೆ?.
ಕನ್ನಡದ ಹಾಡೊಂದ ಕೇಳಲು,
ಮೈಮನ ರೋಮಾಂಚನಗೊಂಡು ಆವೇಶಗೊಂಡಿದು ಏಕೆ?