ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!
ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!
ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್‍ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.
ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಅಸಾಧ್ಯ. ಮಹಾತ್ಮ ಬಂದರೆ, ಅವರೂ ಭ್ರಷ್ಟಾಚಾರ ಮಾಡಬೇಕಾದೀತು, ಅಂದಿದ್ದ, ಮಣ್ಣಿನ ಮಗನ ಮಗ, ಹೆಚ್ ಡಿ. ಕುಮಾರಸ್ವಾಮಿ, ಈ ಆಂದೋಲನಕ್ಕೆ ಖಂಡಿತಕ್ಕೂ ಬೆಂಬಲ ನೀಡಲಾರ, ಆಂದೋಲನದಲ್ಲಿ ಪಾಲ್ಗೊಳ್ಳಲಾರ ಅಲ್ಲವೇ?
ಸುದ್ದಿ ೨: ಪಾಕಿಸ್ತಾನದ ಅನುಮತಿ ಇಲ್ಲದೇ ಪಾಕಿನ ವಾಯುಮಾರ್ಗ ಬಳಸಿ, ಪಾಕಿನೊಳಗೆ ನುಗ್ಗಿದ ಅಮೇರಿಕಾ ಸೈನ್ಯದಿಂದ ಒಸಾಮಾ ಬಿನ್ ಲಾಡೆನ್ ಹತ್ಯೆ.
ಪ್ರಶ್ನೆ: ಪಾಕಿಸ್ತಾನದ ಅನುಮತಿ ಇಲ್ಲದೇ ಪಾಕಿನ ವಾಯುಮಾರ್ಗ ಬಳಸಿ, ಪಾಕಿನೊಳಗೆ ನುಗ್ಗಿ, ಮುಂಬಯಿ ಭಯೋತ್ಪಾದಕಾ ಘಟನೆಗೆ ಕಾರಣರಾದವರನ್ನು ಹುಡುಕಿ ಹತ್ಯೆಗೈಯಲು ಭಾರತೀಯ ಸೈನ್ಯಕ್ಕೆ ಸಾಧ್ಯವೇ? ಇದಕ್ಕೆ ಅಮೇರಿಕಾ ಒಪ್ಪಬಹುದೇ?
ಸುದ್ದಿ ೩: ಜಲಸಮಾಧಿ ಮಾಡಿದ್ದು ತಪ್ಪು; ಒಸಾಮಾ ಬಿನ್ ಲಾಡೆನ್‍ನ ಧರ್ಮವನ್ನು ಗೌರವಿಸಬೇಕಿತ್ತು ಎಂದು ಕಾಂಗ್ರೇಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪ್ರಶ್ನೆ: ಜಗತ್ತಿನ ಉದ್ದಗಲಕ್ಕೂ ಭಯೋತ್ಪಾದನೆಗೆ ಕಾರಣನಾಗಿ, ಮುಸ್ಲಿಮೇತರರನ್ನು ಕೊಲ್ಲುವುದನ್ನೇ ತನ್ನ ಒಂದಂಶ ಕಾರ್ಯಕ್ರಮವನ್ನಾಗಿಸಿಕೊಂಡಿದ್ದ, ಆ ರಾಕ್ಷಸ ಒಸಾಮಾನ ಮತ್ತು ಅಂಥವರ ಧರ್ಮ ಮತ್ತು ಅಂಥವರನ್ನು ಸಮರ್ಥಿಸುವವರ ಧರ್ಮ ಯಾವುದು ಹೇಳ್ತೀರಾ ದಿಗ್ವಿಜಯ್ ಸಿಂಗ್?
ಸುದ್ದಿ ೪: ಯಡಿಯೂರಪ್ಪ ಸರಕಾರ ಕೋಮಾದಲ್ಲಿದೆ, ಹೆದರಿಕೊಂಡು ಕುಳಿತುಕೊಳ್ಳುವವರಾದರೆ ಅಧಿಕಾರ ಬಿಟ್ಟು ತೊಲಗಿ, ಎಂದಿದೆ ಈ ನಾಡಿನ ಸರ್ವೋಚ್ಛ ನ್ಯಾಯಾಲಯ.
ಪ್ರಶ್ನೆ: ಹೆದರಿಕೊಂಡಿದ್ದರೆ ಯಾವಾಗಲೋ ಅಧಿಕಾರ ಬಿಟ್ಟು ಹೋಗುತ್ತಿದ್ದರು. ಹೆದರಿಕೆ ಇಲ್ಲ, ಹಾಗಾಗಿಯೇ ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೂ ಮಾನ್ಯತೆ ನೀಡದೆ, ಅಧಿಕಾರದಲ್ಲಿ ಭದ್ರವಾಗಿ ಕೂತಿದ್ದಾರೆ, ಅಲ್ಲವೇ?
- ಆತ್ರಾಡಿ ಸುರೇಶ ಹೆಗ್ಡೆ
Comments
ಉ: ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!
ಉ: ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!
ಉ: ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!