ನಗು ನಗುತಾ ನಲಿ..
ಪೀಟರ್ ಗೆ ೩೨ ವರ್ಷವಾದರೂ ಇನ್ನೂ ಮದುವೆ ಆಗಿರಲಿಲ್ಲ.
ಒಮ್ಮೆ ಪೀಟರ್ ನ ಸ್ನೇಹಿತ ಕೇಳಿದ , "ಯಾಕೋ ಪೀಟರ್ ಇನ್ನೂ ಮಾಡುವೆ ಮಾಡಿಕೊಂಡಿಲ್ಲ, ನಿನಗೆ ಇಷ್ಟವಾಗುವ ಹುಡುಗಿ ಸಿಕ್ಕಿಲ್ವ?
ಅದಕ್ಕೆ ಪೀಟರ್ ಹೇಳಿದ ನನಗೆ ಇಷ್ಟವಾದ ಹುಡುಗಿಯರು ಬಹಳಷ್ಟು ಜನ ಸಿಕ್ಕರೂ, ಆದರೆ ಅವರನ್ನು ಮನೆಗೆ ಕರೆದುಕೊಂಡು ಹೋದರೆ ನನ್ನ ಅಮ್ಮನಿಗೆ ಇಷ್ಟವಾಗಲಿಲ್ಲ.
ಪೀಟರ್ ನ ಸ್ನೇಹಿತ ಸ್ವಲ್ಪ ಹೊತ್ತು ಯೋಚಿಸಿ "ಒಂದು ಕೆಲಸ ಮಾಡು, ನಿನ್ನ ಅಮ್ಮನಿಗೆ ಇಷ್ಟವಾಗುವಂಥಹ ಹುಡುಗಿಯನ್ನೇ ಹುಡುಕು ಎಂದ"
ಕೆಲವು ತಿಂಗಳಿನ ನಂತರ ಅವರಿಬ್ಬರೂ ಮತ್ತೆ ಭೇಟಿಯಾದರು. ಸ್ನೇಹಿತ ಕೇಳಿದ "ಏನೋ ಪೀಟರ್ ಹುಡುಗಿ ಸಿಕ್ಕಳ? ನಿಮ್ಮ ಅಮ್ಮನಿಗೆ ಇಷ್ಟವಾದಳ ಹುಡುಗಿ?
ಪೀಟರ್ ಎಂದ "ಹೌದು ನನಗೆ ಸರಿಯಾದ ಹುಡುಗಿ ಸಿಕ್ಕಳು, ನನ್ನ ಅಮ್ಮನಿಗೂ ಬಹಳ ಇಷ್ಟವಾದಳು.ಅವಳು ಎಲ್ಲ ನನ್ನ ಅಮ್ಮನ ಹಾಗೆ."
ಸ್ನೇಹಿತ : ಮತ್ತೆ ಇನ್ನೇನು ತೊಂದರೆ, ಮದುವೆ ಆಗಬಹುದಲ್ಲ?
ಪೀಟರ್ : ನಮ್ಮಪ್ಪನಿಗೆ ಇಷ್ಟವಾಗಲಿಲ್ಲ.
-----------------------------------------------------------------------------------------------------------------------------------------------
ಒಮ್ಮೆ ಪೀಟರ್ ಮನೆಯಲ್ಲಿ ಆರಾಮಾಗಿ, ಸುಖಾಸಿನ ನಾಗಿ ಮಗ್ನನಾಗಿ ಪತ್ರಿಕೆ ಓದುತ್ತ ಕುಳಿತಿದ್ದಾಗ ಹಿಂದಿನಿಂದ ಬಂದ ಪೀಟರ್ ನ ಹೆಂಡತಿ ಪೀಟರ್ ನ ತಲೆ ಮೇಲೆ ಲಟ್ಟಣಿಗೆ ಇಂದ ಕುಟ್ಟಿದಳು.
ಪೀಟರ್ ಕೋಪದಿಂದ ಏತಕ್ಕೆ ಹೊಡೆದೆ ಎಂದಾಗ
ಹೆಂಡತಿ : ನಿಮ್ಮ ಪ್ಯಾಂಟಿನ ಜೇಬಿನಲ್ಲಿ ಒಂದು ಚೀಟಿ ಇತ್ತು. ಅದರಲ್ಲಿ MARY ಎಂದು ಬರೆದಿದೆಯಲ್ಲ, ಯಾರ್ರೀ ಅವಳು?
ಪೀಟರ್ : ಅಯ್ಯೋ ಅದಾ ಹೋದ ವಾರ ಕುದುರೆ ರೇಸ್ ಗೆ ಹೋಗಿದ್ದೆನಲ್ಲ ಅಲ್ಲಿದ್ದ ಕುದುರೆಯ ಹೆಸರು ಅಷ್ಟೇ ಎಂದ.
ಆಗ ಹೆಂಡತಿ ಸ್ವಲ್ಪ ಸಮಾಧಾನಗೊಂಡು ತನ್ನ ಪಾಡಿಗೆ ಹೊರಟು ಹೋದಳು
ಮತ್ತೊಂದು ದಿನ ಪೀಟರ್ ಅದೇ ರೀತಿ ಪತ್ರಿಕೆ ಓದುತ್ತಿದ್ದಾಗ ಮತ್ತೊಮ್ಮೆ ಪೀಟರ್ ನ ಹೆಂಡತಿ ಲಟ್ಟಣಿಗೆ ಇಂದ ಸ್ವಲ್ಪ ಜೋರಾಗೆ ಬಾರಿಸಿದಳು
ಪೀಟರ್ : ಮತ್ತೆ ಯಾಕೆ ಹೊಡೆದೆ?
ಹೆಂಡತಿ : ನಿಮ್ಮ ಕುದುರೆ ಫೋನ್ ಮಾಡಿತ್ತು.
----------------------------------------------------------------------------------------------------------------------------------------------------
ಪೀಟರ್ ತನ್ನ ಆಟೋ ದ ಒಂದು ಚಕ್ರ ಬಿಚ್ಚುವುದರಲ್ಲಿ ಮಗ್ನನಾಗಿದ್ದ. ಅಲ್ಲಿಗೆ ಬಂದ ಪೀಟರ್ ನ ಸ್ನೇಹಿತ ಕೇಳಿದ
ಯಾಕೋ ಪೀಟರ್ ಆಟೋ ಚಕ್ರ ಬಿಚ್ಚುತ್ತಿದ್ದೀಯ?
ಅದಕ್ಕೆ ಪೀಟರ್ ಅಂದ ಅಲ್ಲಿರುವ ಬೋರ್ಡ್ ನೋಡಿಲ್ವಾ
"ಪಾರ್ಕಿಂಗ್ ಓನ್ಲಿ ಫಾರ್ ಟೂ ವೀಲೆರ್ಸ್" ಅಂತಿದೆ ಅಂದ.
ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ.
Rating
Comments
ಉ: ನಗು ನಗುತಾ ನಲಿ..
In reply to ಉ: ನಗು ನಗುತಾ ನಲಿ.. by prasannakulkarni
ಉ: ನಗು ನಗುತಾ ನಲಿ..
ಉ: ನಗು ನಗುತಾ ನಲಿ..
In reply to ಉ: ನಗು ನಗುತಾ ನಲಿ.. by Chikku123
ಉ: ನಗು ನಗುತಾ ನಲಿ..
ಉ: ನಗು ನಗುತಾ ನಲಿ..
In reply to ಉ: ನಗು ನಗುತಾ ನಲಿ.. by ನಂದೀಶ್ ಬಂಕೇನಹಳ್ಳಿ
ಉ: ನಗು ನಗುತಾ ನಲಿ..