ಅಕ್ಷಯ ತೃತೀಯದ ದಿನ ಚಿನ್ನ ಬೆಳ್ಳಿ ಕೊಳ್ಳಬೇಕೆ?

ಅಕ್ಷಯ ತೃತೀಯದ ದಿನ ಚಿನ್ನ ಬೆಳ್ಳಿ ಕೊಳ್ಳಬೇಕೆ?

ಅಕ್ಷಯ ತೃತೀಯ ಎಂದರೆ ಚಿನ್ನ ಬೆಳ್ಳಿ ಅಂಗಡಿಗಳು ನವ ವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿ ನಿಲ್ಲುತ್ತವೆ. ತಿಂಗಳಿಗಿಂತ ಮೊದಲೇ ಕಾಯ್ದಿರಿಸುವಿಕೆ,ವಿಶೇಷವಾದ ರಿಯಾಯಿತಿ, ವಿಶೇಷ ಆಕರ್ಷಣೆ, ವಿಶೇಷ ಕೊಡುಗೆಗಳು ಹೀಗೆ ಜನರನ್ನು ಆಕರ್ಷಿಸಲು ಒಂದಿಲ್ಲೊಂದು ಪ್ರಚಾರ ಮಾಡಿ ಅಕ್ಷಯ ತೃತೀಯದ ದಿನಕ್ಕೆ ಸಿದ್ಧವಾಗುತ್ತವೆ. ಇನ್ನು ಆ ದಿನದಂದು ಬೆಳಿಗ್ಗೆ ಆರರಿಂದಲೇ ಚಿನ್ನ ಬೆಳ್ಳಿ ಅಂಗಡಿಗೆ ಮುಗಿಬೀಳುವ ಜನ, ಬೆಳಗ್ಗಿನಿಂದ ರಾತ್ರಿಯ ತನಕ ಅಂಗಡಿಗಳು ತುಂಬಿ ತುಳುಕುತ್ತಿರುತ್ತವೆ.

ಅಸಲಿಗೆ ಅಕ್ಷಯ ತೃತೀಯ ಎಂದರೇನು?

ಹಿಂದೂಗಳ ಪ್ರಕಾರ ವೈಶಾಖಮಾಸ ಶುಕ್ಲಪಕ್ಷದ ಮೂರನೇ ದಿನ (ತೃತೀಯ) ವಿಷ್ಣುವಿನ ಅವತಾರಗಳಲ್ಲೊಂದಾದ ಪರಶುರಾಮ ಅವತಾರವೆತ್ತಿದ ದಿನ, ವೇದವ್ಯಾಸ ದೇವರು ಗಣೇಶನಿಗೆ ಮಹಾಭಾರತವನ್ನು ಉಪದೇಶಿಸಿದ ದಿನ. ಗಂಗಾ ನದಿ ಉಗಮವಾದ ದಿನ ಎಂಬ ನಂಬಿಕೆಯೂ ಉಂಟು. ಆದ್ದರಿಂದ ಈ ದಿನಕ್ಕೆ ವಿಶೇಷವಾದ ಮನ್ನಣೆ ಇದೆ. ಈ ದಿನದಂದು ಯಾವುದೇ ಶುಭಕಾರ್ಯ ಮಾಡಿದರೆ ಬಹಳ ಒಳ್ಳೆಯದು ಎಂಬ ನಂಬಿಕೆ ಇದೆ. ಈ ದಿನ ಪೂರ್ತಿ ಒಳ್ಳೆಯ ಮಹೂರ್ತ, ಯಾವುದೇ ನಿರ್ಧಿಷ್ಟವಾದ ಮಹೂರ್ತದಲ್ಲೇ ಮಾಡಬೇಕೆಂದಿಲ್ಲ. ಯಾವ ಒಳ್ಳೆಯ ಕೆಲಸಗಳು ಮಾಡಿದರು ಭಗವಂತ ಸದಾ ಕಾಪಾಡುತ್ತಾನೆಂಬ ಪ್ರತೀತಿ ಉಂಟು.

ಆದರೆ ಕಳೆದ ಕೆಲವು ವರ್ಷಗಳಿಂದ ಈ ದಿನವನ್ನು ಕೊಳ್ಳುಬಾಕ ಸಂಸ್ಕೃತಿಗೆ ಮೀಸಲು ಮಾಡಿದ್ದರೆ ವರ್ತಕರು. ಈ ದಿನ ಚಿನ್ನ ಬೆಳ್ಳಿ ಕೊಂಡರೆ ನಿಮ್ಮ ಸಿರಿ ಸಂಪತ್ತು ವೃದ್ಧಿಯಾಗುವುದು ಎಂಬ ಮೂಢ ನಂಬಿಕೆಯ ಬೀಜವನ್ನು ಬಿತ್ತಿದ್ದಾರೆ. ಚಿನ್ನ ಬೆಳ್ಳಿ ಕೊಂಡರೆ ಯಾವತ್ತಿದ್ದರೂ ಸಂಪತ್ತು ವೃದ್ಧಿಯಾದಂತೆ ಏಕೆಂದರೆ ಚಿನ್ನ ಬೆಳ್ಳಿಯ ಬೆಲೆ ಹೆಚ್ಚುಕಮ್ಮಿ ದಿನದಿಂದ ದಿನಕ್ಕೆ ಜಾಸ್ತಿ ಆಗುವುದೇ ಹೊರತು ಕಮ್ಮಿಯಾಗುವುದಿಲ್ಲ. ಆದರೆ ಈ ದಿನವೇ ಕೊಳ್ಳಬೇಕೆಂಬ ಪದ್ಧತಿ ಯಾರು ಕಂಡು ಹಿಡಿದರೋ?. ಉಳ್ಳವರು ಹೇಗೋ ಕೊಂಡುಕೊಳ್ಳುತ್ತಾರೆ, ಆದರೆ ಇಲ್ಲದವರು ಈ ದಿನ ಕೊಂಡುಕೊಂಡರೆ ಒಳ್ಳೆಯದು ಎಂದು ಕಾಸಿಲ್ಲದಿದ್ದರೂ ಸಾಲ ಮಾಡಿ ಆದರೂ ಕೊಳ್ಳಲು ಮುಂದಾಗುತ್ತಿರುವುದು ವಿಪರ್ಯಾಸ. ಏನೂ ಇಲ್ಲದಿದ್ದರೆ ಒಂದು ಸಣ್ಣ ಮೂಗು ಬೊಟ್ಟನ್ನಾದರೂ ಖರೀದಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಹೀಗೆ ಮಾಡಿ ಮಾಡಿ ಚಿನ್ನ ಬೆಳ್ಳಿಯ ಬೆಲೆ ಗಗನಕ್ಕೆ ಮುಟ್ಟಿದೆ. ಬೆಳ್ಳಿಯ ಬೆಲೆಯಂತೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಜಾಸ್ತಿಯಾಗಿದೆ.

ಈಗ ನಾಳೆ ಅಕ್ಷಯ ತೃತೀಯ ಮತ್ತೆ ಬಂದಿದೆ. ಅದರಲ್ಲೂ ಶುಕ್ರವಾರ ಬಂದಿರುವುದು. ಇನ್ನು ಕೇಳಬೇಕೆ,

ವಿ.ಸೂ: ಮೇಲೆ ಹೇಳಿರುವ ವಿಷಯಗಳಷ್ಟೂ ನನ್ನ ವೈಯಕ್ತಿಕ ಅನಿಸಿಕೆ ಅಷ್ಟೇ. ಯಾರೊಬ್ಬರ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ ನನಗಿಲ್ಲ. 

Comments