ಮರೆಯಬೇಕು ಕೆಟ್ಟ ಗಳಿಗೆಗಳನು!
ಮರೆಯಬೇಕು ಕೆಟ್ಟ ಗಳಿಗೆಗಳನು!
ಸಖೀ,
ನಗುವುದಕೇ
ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳಲೇಕೆ
ವ್ಯರ್ಥ ವ್ಯಯಿಸುವೆ ಜೀವನದ
ಈ ಅಮೂಲ್ಯ ಕ್ಷಣಗಳನು
ಮರೆತು ಬಿಡು ವ್ಯಥೆಯ
ನಿನ್ನೆಯ ಆ ಹಳೆ ಕತೆಯ
ಮರೆತಿಲ್ಲವೇ ಆ ಸೂರ್ಯ
ಗ್ರಹಣ ಹಿಡಿಸಿದ ಚಂದ್ರನನು
ಕ್ಷಮಿಸಿ ಬೆಳಗುತಿಲ್ಲವೇ ತನ್ನ
ಪ್ರಭೆಯಿಂದಲೇ ಆತನನು
ಮರೆತಿಲ್ಲವೇ ಆ ಶಶಿ
ಸೂರ್ಯನಿಗೆ ಅಡ್ಡ
ನಿಂತಿದ್ದ ಭೂಮಿಯನು
ಚೆಲ್ಲುತಿಲ್ಲವೇ ಸದಾ
ಭೂಮಿಯುದ್ದಗಲಕೂ
ಬೆಳದಿಂಗಳನು
ಮರೆಯಬೇಕು
ಕೆಟ್ಟ ಗಳಿಗೆಗಳನು
ದುಃಖದ ಕತೆಗಳನು
ಮನ್ನಿಸಬೇಕು
ಮನ್ನಿಸಿ ಬೆರೆಯಬೇಕು
ರಾತ್ರಿ ಕಳೆದ ಮೇಲೆ
ಬೆಳಕು ಹರಿಯುವಂತೆ
ದುಃಖವದು ಅಳಿದ ಮೇಲೆ
ಸುಖದ ಆಗಮನವಂತೆ
*-*-*-*-*-*-*-*
Rating
Comments
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
In reply to ಉ: ಮರೆಯಬೇಕು ಕೆಟ್ಟ ಗಳಿಗೆಗಳನು! by santhosh_87
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
In reply to ಉ: ಮರೆಯಬೇಕು ಕೆಟ್ಟ ಗಳಿಗೆಗಳನು! by srimiyar
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
In reply to ಉ: ಮರೆಯಬೇಕು ಕೆಟ್ಟ ಗಳಿಗೆಗಳನು! by saraswathichandrasmo
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!
In reply to ಉ: ಮರೆಯಬೇಕು ಕೆಟ್ಟ ಗಳಿಗೆಗಳನು! by ksraghavendranavada
ಉ: ಮರೆಯಬೇಕು ಕೆಟ್ಟ ಗಳಿಗೆಗಳನು!