ಅಣುಕುವಾಡು

ಅಣುಕುವಾಡು

ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು

ಬೆಂಗಳೂರೆಗೆ ನಿನ್ನನು

ಯಾವ ಸಂಬಳದಾಸೆ ಕುಕ್ಕಿತು

ನಿನ್ನ ಆಸೆಯ ಕಣ್ಣನು ||

ಹೊಸೂರ್ ರೋಡಿನ ಆಚೆ ಎಲ್ಲೋ

ನಿನ್ನ ಕಂಪನಿ ಬಿಲ್ಡಿಂಗ್ ಇದೆ

ಟ್ರಾಫಿಕ್ ಜಾಮ್‌ನಲಿ ಸಿಕ್ಕಿಕೊಂಡಿರೊ

ನಿನ್ನ ಬರವನು ಕಾದಿದೆ || ಯಾವ ಸಾಫ್ಟ್‌ವೇರ್ ...||

ಟಿ,ವಿ.,ಫ್ರಿಜ್‌ಗೂ ಎಸಿ ರೂಮು

ನಿನ್ನ ಮನೆಯಲಿ ತುಂಬಿವೆ

ಏನಿದ್ರೇನು ವೇಸ್ಟುಸುಮ್ಮನೆ

ಆಫೀಸ್ ಅಲ್ಲವೆ ನಿನ್ ಮನೆ? || ಯಾವ ಸಾಫ್ಟ್‌ವೇರ್ ...||

ಕೆರೀರ್ ಅನ್ನೋ ಹುಚ್ಚಿನಲಿ ದಿನಾ

ನಿನ್ನ ನೀನೇ ಮರೆಯುವೆ

ನಿನ್ನಲ್ಲಿರುವ ಸೃಜನಶಿಲತೆ

ಸೋರಿ ಹೋಗುತಿದಿ ತಣ್ಣನೆ... || ಯಾವ ಸಾಫ್ಟ್‌ವೇರ್ ...||

ಕೃಪೆ: ವಿಜಯರಾಜ್ ಕನ್ನಂತ್

Rating
No votes yet