ಅಮೆರಿಕೆಯ ೯/೧೧ ಮತ್ತು ಭಾರತದ ೨೬/೧೧

ಅಮೆರಿಕೆಯ ೯/೧೧ ಮತ್ತು ಭಾರತದ ೨೬/೧೧

ಅಮೆರಿಕೆಯ ೯/೧೧ ಮತ್ತು ಭಾರತದ ೨೬/೧೧ ರ ಆಕ್ರಮಣಗಳ ನಡುವೆ ಸಾಮ್ಯತೆ ಇಲ್ಲ ಅಂತ ಅಮೆರಿಕೆಯ ಅಂಬೋಣ. ೯/೧೧/೨೦೦೧ ರಲ್ಲಿ ಅಮೆರಿಕೆಯ ವಿರುದ್ಧ ನಡೆದ ಆಕ್ರಮಣಕ್ಕೂ ನಮ್ಮ ದೇಶದಲ್ಲಿ ಪಾಕಿ ಕೊಲೆಗಡುಕರು ನಡೆಸಿದ ೨೬/೧೧/೨೦೦೮ ರ ಆಕ್ರಮಣಕ್ಕೂ ಸಾಮ್ಯತೆ ಇದೆಯೋ ಇಲ್ಲವೋ ಎಂದು ಸ್ವಲ್ಪ ನೋಡೋಣ.


ಅಮೆರಿಕನ್ನರು ಇಸವಿ ಬರೆಯುವಾಗ ಮೊದಲು ತಿಂಗಳ ನ್ನೂ ನಂತರ ದಿನವನ್ನೂ, ಕೊನೆಗೆ ವರ್ಷವನ್ನೂ ಬರೆಯುತ್ತಾರೆ. ನಾವು ಭಾರತೀಯರು ಮೊದಲು ದಿನವನ್ನೂ, ನಂತರ ತಿಂಗಳನ್ನೂ, ಕೊನೆಗೆ ವರ್ಷವನ್ನೂ ಬರೆಯುತ್ತೇವೆ. ರೂಢಿ ಹೀಗಿರುವಾಗ, ಬಹುಶಃ ಇದನ್ನು ಗಣನೆಗೆ ತೆಗೆದು ಕೊಂಡೋ ಏನೋ  ಅಮೆರಿಕನ್ನರು ಹೇಳಿದ್ದು ಇವೆರಡಕ್ಕೂ ಸಾಮ್ಯತೆ ಇಲ್ಲ ಎಂದು ಅಥವಾ ಸಾಮ್ಯತೆ ಇಲ್ಲ ಎನ್ನುವ ಹೇಳಿಕೆಗೆ economical angle ಕೊಟ್ಟು ನೋಡಿದಾಗ ಅಮೆರಿಕೆಯ ಧಾಳಿಯಲ್ಲಿ ಸತ್ತಿದ್ದು ಶ್ರೀಮಂತರೂ (ನಮ್ಮೊಂದಿಗೆ ಹೋಲಿಸಿಕೊಂಡಾಗ), ಬಹುತೇಕ ಅಮೆರಿಕನ್ನರೂ ಆಗಿದ್ದು ೨೬/೧೧ ರ ಧಾಳಿಯಲ್ಲಿ ಸತ್ತವರು ಬಹುತೇಕ ದರಿದ್ರರೂ, ಯಕಃಶ್ಚಿತ್ ಭಾರತೀಯರು ಎನ್ನುವ ತಾರತಮ್ಯವೂ ಅಡಗಿರಬಹುದೇ? ಗಾಯಕ್ಕೆ ಉಪ್ಪನ್ನು ಉಜ್ಜುವ ಅಮೆರಿಕೆಯ ಈ ಮಾತು ಸಾಲದು ಎನ್ನುವಂತೆ, ಅಮೆರಿಕೆಯ ಹಾಗೆ ನಾವೂ ಪಾಕ್ ಗಡಿ ಅತಿಕ್ರಮಿಸಿ ಕೊಲೆಗಡುಕರನ್ನು ಸದೆ ಬಡಿಯಬೇಕು ಎನ್ನುವ ಬೇಡಿಕೆಗೆ ನಮ್ಮ ಘನ ಸರಕಾರ ಉಲಿದಿದ್ದು “ಅಮೆರಿಕೆಯ ಗಡಿ ಅತಿಕ್ರಮಣದಿಂದ ಈಗಾಗಲೇ ಕಸಿವಿಸಿ ಅನುಭವಿಸುತ್ತಿರುವ ಪಾಕಿಗೆ ಮತ್ತಷ್ಟು ಕಸಿವಿಸಿ ಯುಂಟು ಮಾಡೋ ಯಾವ ಕೆಲಸವನ್ನೂ ನಾವು ಮಾಡೋಲ್ಲ” ಅಂತ. ಅಂದರೆ ನೀವು ನಮ್ಮ ಬೀದಿಗಳಲ್ಲಿ, ರೇಲ್ವೆ ನಿಲ್ದಾಣಗಳಲ್ಲಿ ನಿಮಗೆ ತೋಚಿದ ಹಾಗೆ ರಕ್ತ ಹರಿಸಿದರೂ ನಾವು ಸುಮ್ಮನೆ ಸಹಿಸುತ್ತೇವೆ, ನಮ್ಮ ಜನರ ಪ್ರಾಣ ಹಾನಿಗಿಂತ ನಿಮಗಾಗಬಾರದ ಕಸಿವಿಸಿ ನಮಗೆ ಮುಖ್ಯ, ಇದು ನಮ್ಮ ಸರಕಾರದ ಧೋರಣೆ.  

 

Rating
No votes yet

Comments