ಮಾತೆಗೊಂದು ನಮನ ಗೀತೆ

ಮಾತೆಗೊಂದು ನಮನ ಗೀತೆ

ಕವನ

ದೇವರು ಕಳುಹಿದ ದೇವತೆ

ಮಕ್ಕಳ ಮುದ್ದಿನ ಮಾತೆ

ಶಾಂತಿ, ಸಹನೆ, ಪ್ರೀತಿ, ಮಮತೆ

ಕ್ಷಮೆಗೆ ಅವಳೇ ಹೆಸರಂತೆ

ಅವಳಿಗೆ ಅವಳೆ ಸಾಟಿಯಂತೆ

ನಮನವಾಗಿ ಅರ್ಪಿಸುವೆ ಈ ಪುಟ್ಟ ಕವಿತೆ.

 

ಮಾತೆಗಿಂತ ಯಾರಿಹರು ಮಿಗಿಲು

ಅವಳೊಂದು ಪ್ರೀತಿ ಸುರಿಸುವ ಮುಗಿಲು

ಸ್ನೇಹ, ವಾತ್ಸಲ್ಯ ತುಂಬಿಹ ಕಡಲು

ಮಮತೆಯ ಅಕ್ಷಯ ಪಾತ್ರೆ ಅವಳೊಡಲು

ಇಷ್ಟ ಎಲ್ಲರಿಗೂ ಅವಳ ಮಡಿಲು

ಮಡಿಲಲ್ಲಿ ಮರೆಯುವರು ತಮ್ಮೆಲ್ಲ ಅಳಲು.

 

ಅತ್ತರೆ ಮಕ್ಕಳು ಮಾಡುವಳಕ್ಕರೆ

ನಕ್ಕರೆ ಅವಳಿಗದೇ ಸಿಹಿಸಕ್ಕರೆ

ತಪ್ಪು ಮಾಡೆ ತೋರುವಳು ಹುಸಿಕೋಪ

ಗುರುವಾಗುವಳು ನಡೆ ನುಡಿ ತಿದ್ದಿಪ

ಹೆದರಿಸೆ ಆಗುವಳೊಮ್ಮೊಮ್ಮೆ ಗುಮ್ಮ

ಮಗುವಿನೊಡನೆ ಆಟದಿ ಮಗುವಾಗುವಳು ಅಮ್ಮ.

Comments