ಸಿಂ ಗನ್ನಡಂ ಗೆಲ್ಗೆ

ಸಿಂ ಗನ್ನಡಂ ಗೆಲ್ಗೆ

ನಮ್ ಇಸ್ಮಾಯಿಲ್ ರವರ ಕನ್ನಡವೆಂಬ ಸಸ್ಯಾಹಾರಿ ಭಾಷೆ ಓದಿದಾಗ ನನ್ನ ಇತ್ತೀಚಿನ ಅನುಭವ ಹಂಚಿಕೊಳ್ಳೋಣವೆನಿಸಿತು.

ಮೊನ್ನೆ ಸಿಂಗಾಪುರದಿಂದ ಬೆಂಗಳೂರಿಗೆ ಬರುವಾಗ ಕನ್ನಡದಲ್ಲಿದ್ದ ಊಟದ ಮೆನು ಕಾರ್ಡ್ ನೋಡಿ ಬಹಳ ಖುಷಿಯಾಯಿತು. ಆದರೆ ಓದುತ್ತಿದ್ದಂತೆ ಸ್ವಲ್ಪ ಕಸಿವಿಸಿಯೂ ಆಯ್ತು.ಇಂಗ್ಲೀಷನ್ನು ತೀರಾ ಹಸಿಹಸಿಯಾಗಿ ಇಳಿಸಿದ್ದಾರೆ ಅನ್ನಿಸಿತು.

ಉದಾಹರಣೆಗೆ : ಸೋಯಾಬೀನ್ ಡಂಪ್ಲಿಂಗ್ಸ್ ಕರ್ರಿ, ಬಾಸ್ಮ್ಸ್ತ್‌ತಿ ರೈಸ್ , ವೆಜಿಟೆಬಲ್ಸ್ ಮತ್ತು ..ಫೀಲಾಪ್ ಜೊತೆಗೆ... ಇತ್ಯಾದಿ.

ನಾನೂ ನನ್ನ ಸ್ನೇಹಿತನೂ ಕನ್ನಡಪ್ರೇಮಿ ಸಸ್ಯಾಹಾರಿಗಳು. ಇರಲಿ ಕನ್ನಡದಲ್ಲಿ ಓದಿಯೇ ಆರ್ಡರ್ ಮಾಡೋಣ ಎಂದಿದ್ದೆವು. ನಾನು ಸುಮ್ಮನೆ ಇಂಗ್ಲೀಷ್ ಮೆನುಕಾರ್ಡ್ ತಿರುವಿ ಹಾಕಿದೆ. ಸದ್ಯ ಒಳ್ಳಯದೇ ಆಯಿತು !.

ಇಂಗ್ಲೀಷ್ ನಲ್ಲಿ with Lamb Chops ಎಂದು ಇರುವುದನ್ನು ಸಸ್ಯಾಹಾರಿ ಕನ್ನಡ ಅನುವಾದಕ ನುಂಗಿಬಿಟ್ಟಿದ್ದಾನೆ. ಬರೀ ಕನ್ನಡದ ಮೆನು ಓದಿ ಆರ್ಡರ್ ಮಾಡಿದ್ದರೆ ಸಸ್ಯಾಹಾರವೆಂದುಕೊಂಡು ಮಾಂಸಾಹಾರ ತಿನ್ನಬೇಕಾಗಿತ್ತು.

ಸಿಂ ಗನ್ನಡಂ ಬಾನ್ಗೆ ಸಿಂ ಗನ್ನಡಂ ಬಾಡ್ಗೆ

ಸುಚರ

--------------------

ಬ್ಲಾಗುವ ನಾಯಿ ಕಚ್ಚುವುದಿಲ್ಲ

Rating
No votes yet

Comments