ಉದಿತಾಲೋಚನೆಗಳು
ಗೆಳೆಯ ಸುನಿಲರು ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆ ಬರೆಯುತ್ತಾ ಉದಿತ ಹಾಗು ಉಲ್ಲಿತ ಪದಗಳ ಬಗ್ಗೆ ಹಾಗು ಅದನ್ನು random ಬದಲು ಬಳಸ ಬಹುದೆಂಬ ವಿಚಾರ ಮಂಡಿಸಿದ್ದರು. ಈಗಾಗಲೇ ಆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.ಈ ಬಗ್ಗೆ ಮೊದಲು ಯೊಚಿಸಿದಾಗ ಅದನ್ನು ಬಳಸಲು ಸಾಧ್ಯವೇ ಅನ್ನಿಸಿತು. ಇಂದು ಅದರ ಬಗ್ಗೆ ಒಂದೆರಡು ಪದ್ಯ ಹೊಳೆಯಿತು. ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲವೆಂದು ಭಾವಿಸಿ ಹೇಳುತ್ತಿದ್ದೇನೆ.
ಆಂಡಯ್ಯನಭಿಮಾನಿಯೊಬ್ಬರು ಜಾಲ
ತಾಂಡವದಲಿ ಯಾದೃಚ್ಛಿಕ ಮೆಚ್ಚದಿರೆ
ರಾಂಡಮಾಗಿ ರಾಜಮಾರ್ಗದಲ್ಲಿ ಕವಿಯಾಗಿ ಹೋಗುತ್ತಾ
ಕಂಡರ್ ಉಲ್ಲಿಯಂ ಬಲಭುಜದಮೇಲುದುರಿದ ಪಲ್ಲಿಯಂದದಿ
ಇನ್ನೊಂದು ಪದ್ಯ, ನಿಮಗೆಲ್ಲಾ ಗೊತ್ತಿರುವ ಹಾಸ್ಯ ಪ್ರಸಂಗದ್ದು.
ಬಕುತ ಪ್ರಹ್ಲಾದ ನಾಟಕದೊಳ್ಹಿರಣ್ಯಕಶಿಪು ಅವೇಶದೊಳ್
ರಕುತದ ಕಣ್ಣಿಂದ ಇಲ್ಲಿರುವನೇ ನಿನ್ನಿಹರಿಯೆನುತ
ನಾಲ್ಕಾರು ಕಂಬದೊಳ್ ಉಲ್ಲಿಯೋ ಕಂಬವ ತೋರೆ
ಚಕಿತನಾದ ಬಾಲನು ಅಲ್ಲಿಲ್ಲ ಇಲ್ಲಿರುವುದು ಖಚಿತವೆಂದ
-ಸುಚರ
------------------
ಬ್ಲಾಗುವ ನಾಯಿ ಕಚ್ಚುವುದಿಲ್ಲ