ಸೂರ್ಯ-ಚಂದ್ರರ ನೀತಿ ಸಂದೇಶ!

ಸೂರ್ಯ-ಚಂದ್ರರ ನೀತಿ ಸಂದೇಶ!

ಸೂರ್ಯ-ಚಂದ್ರರ ನೀತಿ ಸಂದೇಶ!
 
 
ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗ
ನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗ
ಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗ
ಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...

ಬಾನಿನಲ್ಲಿ ಬಾಡಿಗೆಯ ದೀಪಕ್ಕೆ ಕನ್ನಡಿ ಹಿಡಿದ ಚಂದ್ರ
ಹಂಗಿಸಿ ನಕ್ಕ, ಸುತ್ತ ಯಾರೂ ಇರ್ಲಿಲ್ಲ ನಾನು ಮಾತ್ರ
ಎಂದರಿತು ದಿಟ್ಟಿಸಿದರೆ ನೀತಿ ಸಾರುತ್ತಾ ಕೂತಿದ್ದ ಭದ್ರ
ಆತನ ಸಂದೇಶವನ್ನು ಸ್ವೀಕರಿಸಿ ಅರಿತೆ ನಾನಗುತ್ತಾ...

ಹಗಲಲ್ಲಿ ಬಾನಿಗೆ ಒಡೆಯನಾಗಿ ಇದ್ದು ರವಿ ಮರೆಯಾದ
ಹೋಪಾಗ ಶಶಿಯ ಬಾಳಿಗೊಂದು ಅರ್ಥ ನೀಡಿ ಹೋದ
ಮಾತಾಪಿತ ಗುರುಹಿರಿಯರು ಕಿರಿಯರಿಗೆ ರವಿಯಂದದಿ
ಪ್ರಭಾವ ಬೀರುವರು ಇವರ ಬಾಳನ್ನು ಸದಾ ಬೆಳಗುತ್ತಾ...

ನಾವು ಚಂದ್ರನಂತಿರಬೇಕು ನಮ್ಮ ಹಿರಿಯರ ಸಮ್ಮುಖದಲ್ಲಿ
ನಾವು ಸೂರ್ಯನಂತಿರಬೇಕು ನಮ್ಮ ಕಿರಿಯರ ಬಾಳಿನಲ್ಲಿ
ಹಿರಿಯರ ಪ್ರಭೆಯಿಂದ ಬೆಳೆಸಿಕೊಂಡರೆ ಪ್ರತಿಭೆ ನಮ್ಮಲ್ಲಿ
ಕಿರಿಯರು ಇರುತ್ತಾರೆ ನಮ್ಮ ಪ್ರಭೆಯನ್ನು ಪ್ರತಿಫಲಿಸುತ್ತಾ...
******************

Rating
No votes yet

Comments