ಕಲೆಗಾರ
ಕವನ
ರೈತನು ಬೆಳೆವನು ಅನ್ನವನ್ನು
ಕಣ್ಮನ ಸೆಳೆಯುವ ಚೆಲುವನ್ನು
ಬರಡಾಗಿಹ ಬಯಲಲ್ಲಿ ಬೆವರನ್ನು ಸುರಿಸಿ
ಹಗಲಿರುಳೆನ್ನದೇ ಶ್ರಮವನ್ನು ವ್ಯಯಿಸಿ
ಬೆಳೆವನ್ನು ತಿಳಿಹಸಿರಿನ ಚೆಲುವನ್ನು
ಭತ್ತದ ತೆನೆಯು ತೂಗುತ್ತಲಿರಲು
ಹಕ್ಕಿಯ ಹಿಂಡು ತೇಲುತಾ ಬರಲು
ಚಿಲಿಪಿಲಿಗುಟ್ಟುತ್ತಾ ಕಾಳನ್ನು ಹೆಕ್ಕಲು
ರೈತನ್ನು ಬೆಳೆವುದು ಕಲೆಯನ್ನು
ಕಣ್ಮನ ಸೆಳೆಯುವ ಚೆಲುವನ್ನು
ಬಿತ್ತಿದ ಬೀಜವು ಕಣ್ ಬಿಡೇ ತಿಳಿಹಸಿರು
ಹುಲ್ಲಾಗುತ್ತ ಏರಲು ಹಚ್ಚಸಿರು
ತೆನೆತೂಗುತ್ತಲಿರಲು ಹಳದಿಯ ಗೊಂಚಲು
ರೈತನ್ನು ಬೆಳೆವುದು ಅನ್ನವನ್ನು
ಕಣ್ಮನ ಸೆಳೆಯುವ ಬಣ್ಣವನ್ನು
ಗದ್ದೆಯ ಕೆಸರಲ್ಲಿ ಏಡಿಯ ಹಿಂಡು
ಪುಡಿಮೀನಿನ ಬೇಟೆಗೆ ಬೆಳ್ಳಕ್ಕಿಯು ಬಂದು
ಗದ್ದೆಯ ಬದಿ ಗೂಡಲ್ಲಿ ಮೊಟ್ಟೆಗಳುಂಟು
ರೈತನ್ನು ಬೆಳೆವನ್ನು ಅನ್ನವನ್ನು
ಜೊತೆಯಲಿ ಸಲಹಿಯ ಜೀವವನು
ತೆನೆಗಳ ನಡುವಲಿ ಕಳೆಯನ್ನು ಕೀಳುತಾ
ಹೆಣ್ಣಾಳಿನ ಹಾಡಲಿ ಕಾಯಕ ಸಾಗುತ್ತ
ಮಧ್ಯಾಹ್ನದ ಕಡುಬಿನ ಊಟವ ಸವಿಯುತ್ತಾ
ರೈತನು ಬೆಳೆವನ್ನು ಅನ್ನವನು
ಜೊತೆಗೆ ಬೆಸೆದಿಹ ಬಂಧವನು