ಮೂಢ ಉವಾಚ - 82
ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು |
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ ||
ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ |
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ ||
**********************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 82
In reply to ಉ: ಮೂಢ ಉವಾಚ - 82 by partha1059
ಉ: ಮೂಢ ಉವಾಚ - 82