ಜಾದೂ

ಜಾದೂ

ಕವನ

ಕಹಿಯ ಕುಡಿದು ಸಿಹಿ ಜೇನ ಕೊಡುವ ಜೇನ್ನೊಣದೆಂಥ ಜಾದೂ

ಮಣ್ಣತಿಂದು ಗಮಸುಮವ ಕೊಡುವ ಗಿಡದದೆಂಥ ಜಾದು

ಒರಟು ಹಲಸೊಳು ಸಿಹಿಯ ಸವಿಯನ್ನಿಟ್ಟ
ಮರದದೆಂಥ ಜಾದು

ಕೇಕೆದನಿಯ ನವಿಲ ಚೆಲುವಿನದೆಂಥ ಜಾದೂ

ಮುಳ್ಳು ಮೈಯ ತುದಿ ಮೃದು ಸುಮವ ಬಿಡುವ ಗುಲಾಬಿಯದೆಂಥ ಜಾದೂ

Comments