ಸುರಕ್ಷತಾ ನಿಯಮಗಳು/ಕಾನೂನು
ಸುರಕ್ಷತಾ ನಿಯಮಗಳು ಮತ್ತು ಕಾನೂನು ಅನುಷ್ಟಾನ ದ ಬಗ್ಗೆ ನಿಮಗೆ ಅನುಮಾನವೇ/ಉದಾಸೀನವೇ ?
ನಮ್ಮ ಭವ್ಯ ಭಾರತದಲ್ಲಿ ಆಂದೋಲನ ಮೂಡಿಸಲು ಜನಜಾಗ್ರತಿಯ ಕಾರ್ಯಕ್ರಮ
ಇತ್ತೀಚೆಗಿನ ಆಕಸ್ಮಿಕ /ಅಫಘಾತದಲ್ಲಿ ಜನರ ದುರ್ಮರಣ, ವಾರ್ತಾಪತ್ರಿಕೆಮತ್ತು ದೂರದರ್ಶನ ಸಚಿತ್ರ ಪ್ರಕಟಣೆ ಆಧಾರಿತ ಲೇಖನ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಮುಂಜಾನೆ ವಾರ್ತಾ ಪತ್ರಿಕೆ ಕೈಯಲ್ಲಿ ಹಿಡಿದು ಚಾ ಆನಂದ ಸವಿಯುವ ನಮ್ಮ ದೇಶದ ಅನುಭವಿ ನಾಗರೀಕರು ಪ್ರತಿದಿನ ಹೆಡ್ಲೈನ್ ನಲ್ಲಿ ರಸ್ತೆ ಅಗಲೀಕರಣ ಕ್ಕಾಗಿ ರಸ್ತೆಯ ಬದಿಯ ಮರ ಕಡಿಯುವಾಗ ಮರದ ಗೆಲ್ಲು ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನದ ಹಿಂದಿನ ಸಿಟಿ ನಲ್ಲಿ ಕುಳಿತಿರುವ ಮಹಿಳೆ ಯ ತಲೆ ಮೇಲೆ ಬಿದ್ದು ಮಹಿಳೆಯ ಸಾವು ,,ದೀಪಾವಳಿ ಸಮಯದಲ್ಲಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದು ಅಪಾರ ನಸ್ಟ ಮತ್ತು ಅಂಗಡಿ ಮಾಲೀಕನ ಸಾವು ಪಟಾಕಿ ಸಿಡಿದು ಮಗುವಿನ ದ್ರಷ್ಟಿ ಹೋಯ್ತು ,ವಾಹನ ವೇಗವಾಗಿ ಮತ್ತು ಚಾಲಕನ ಅಜಾ ಗ್ರತೆ ಯಿಂದ ತುಂಬಿದ ಬಸ್ ಕೆರೆಯಲ್ಲಿ ಬಿದ್ದು ಸಂಪೂರ್ಣ ಪ್ರಯಾಣಿಕರು ನೀರು ಪಾಲು ಹೀಗೆ ಎಷ್ಟು ಸಾವಿನ ಸುದ್ದಿಗಳು.ಓದುವಾಗ ದುಖ
ಆಗುವುದು ಅಲ್ಲದೆ ಮೇಲಿನ ಪ್ರಶ್ನೆ ಉದ್ಭವಿಸುವಿದು .
ಇದಕ್ಕೆ ಕಾರಣ ಮುಖ್ಯವಾಗಿ ವೇಗ ಅಲ್ಲವೇ ೨ ಸುರಕ್ಷತೆ ನಿಯಮಗಳನ್ನು ಪಾಲಿಸದೇ ಇರುವುದಲ್ಲವೇ ಕೆಲವು ಆಕಸ್ಮಿಕದಲ್ಲಿ ನಡೆದಿದೆ.
ಚಾಲಕನ ತಪ್ಪಿರಬಹುದು,ವಾಹನಗಳನ್ನು ಓಡಿಸುವ ಮೊದಲು ಸರಿಯಾಗಿ ಪರೀಕ್ಷೆಗೆ ಒಳಗಾಗದೆ ಓಡಿಸ ಬಾರದು ವೇಗದ ಮಿತಿ ಇರಬೇಕು ,ಕಣ್ಣು ,ಕಿವಿ ಮತ್ತು ಮನಸ್ಸು ಓಟದ ಮೇಲೆ ಧ್ಯಾನ ಇರಬೇಕು ,ಕುಡಿತದ ಅಮಲು ,ಅತೀ ಶಿಗ್ರವಾಗಿ ಸೇರುವ ಆತುರ ಇರಕೂಡದು .
ರಸ್ತೆ ಬದಿ ಮರ ಕಡಿಯುವಾಗ ಸಂಪೂರ್ಣ ಸುರಕ್ಷತಾ ಕ್ರಮಗಳು,ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳನ್ನು ಗಮನಿಸಬೇಡವೇ ಹಣ ಸಂಪಾದನೆ ಒಂದೇ ಜೀವನದ ಗುರಿಯೇ
ಶಾಲೆ ಕಾಲೇಜ್ ಗಳಲ್ಲಿ ಮಗುವಿನ ಆಹಾರ ಸರಬರಾಜು ಮಾಡುವಾಗ ಊಟದ ಕೋಣೆಯಲ್ಲಿದ್ದ ಶುದ್ಧ ನೀರು ,ಅನ್ನ ಮಕ್ಕಳಿಗೆ ಬಡಿಸುವುದು /ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳಿಗೆ ಆಹಾರ ಕೊಡುವಾಗ ಸಂಭಂದಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಾವು .ಇವು ಸುರಕ್ಷತಾ ನಿಯಮಗಳನ್ನು ಬದಿಗೆ ತೂರಿದ ನಿದರ್ಶನವಾಗಿದೆ.
ಬರೆಯಲು ಸಾಕಷ್ಟು ವಿಷಯಗಳಿದ್ದರೂ ಮುಖ್ಯ ವಿಷಯ ನಿಯಮಗಳು ಅವುಗಳ ಪಾಲನೆ ಅಮೇರಿಕಾ ಮತ್ತು ಸಿಂಗಾ ಪುರಿನ ಪ್ರವಾಸ ಮಾಡಿದ ನನ್ನ ಗೆಳೆಯರಿಗೆ ಇದರ ಸಂಪೂರ್ಣ ಅರಿವಿದೆ .
ನಮ್ಮ ದೇಶದಲ್ಲಿ ಪೋಲಿಸ್ ವ್ಯವಸ್ಥೆ ತುಂಬಾ ಸುಧಾರಿಸಿದೆ .ಆದರೆ ಜನರ ಸಹಕಾರದಿಂದ ಮಾತ್ರವೇ ಸರಕಾರವು ಕೂಡ ಕಾನೂನು ಮತ್ತು ಸರಿಯಾದ ಶಿಕ್ಷೆ ವಿಧಿಸಿ ಅಭಿವೃದ್ಧಿ ಕಾಣ ಬಹುದು .
ಬಹು ಮಹಡಿ ಕಟ್ಟಡಗಳಲ್ಲಿ ದುರಂತ ಸರ್ವೆ ಸಾಮಾನ್ಯವಾದ ಬೆಂಗಳೂರು ಇತ್ಯಾದಿ ನಗರಗಳಲ್ಲಿ ಮತ್ತು ಕಾಲ್ತುಳಿತಕ್ಕೆ ಸಿಕ್ಕಿ ಸಾವುಗಳು ಏಕೆ ?
ಶೀಗ್ರ ಹಣ ಸಂಪದನೆ ಮಿತಿ ಮೀರಿದ ವೇಗದ ಜೀವನ ಶಿವನ ಪಾದ ಸೇರಲು ಅತೀ ಸುಲಭ ಮಾರ್ಗವಾಗಿದೆ .
ನಾನು ಬರೆದ ಲೇಖನ ಎಲ್ಲರೂ ಓದಿ ನಿಮ್ಮ ಸಲಹೆ ಸೂಚನೆ ದಯವಿಟ್ಟು ಕೊಡಿ
ಯುವಜನತೆ ಸಾಧಿಸಲು ತುಂಬಾ ಅವಕಾಶವಿದೆ.
ಇದುವೇ ನಮ್ಮ ಭವ್ಯ ಭಾರತ .
ಜೈ ಹಿಂದ್
ವಂದನೆಗಳು
ಕುಂದಾಪುರ ನಾಗೇಶ್ ಪೈ