“ನೀವು ಕರೆಮಾಡಿದ ಚಂದಾದಾರರು...
“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಿಗೂ ಸ್ಪರ್ದಿಸಿ ಒಂದರಲ್ಲಾದರೂ ಗೆದ್ದು ಖಾತೆ ತೆರೆಯುವ ಭಾರತದ ಪ್ರತಿಪಕ್ಷದ ಆಸೆಗೆ ಕೇರಳದ ಜನ ಓಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ. ಹೀಗೆ, ಕೇರಳದಲ್ಲಿ ಈ ಸಲವೂ ಭಾಜಪಕ್ಕೆ ಸಿಕ್ಕ ಸಂದೇಶ ನಾವು ಕೇಳುವ ಮೊಬೈಲ್ ಸಂದೇಶದ ರೀತಿಯೇ ಆಯಿತು. ಈ unmistakable ಸಂದೇಶ ಕೊಟ್ಟವ ಮತದಾರ ಮಹೋದಯ. ನಿರಾಶೆಯ ಸಂಗತಿ ಏನೆಂದರೆ ಈ “ಸ್ವಲ್ಪ ಸಮಯ” ಕಾಯುವಿಕೆ ಐದು ವರ್ಷಗಳಷ್ಟು ಸುದೀರ್ಘ.
ಅತ್ತ ತಮಿಳು ನಾಡಿನಲ್ಲೂ incumbent ಪಕ್ಷ ಸೋತು ಸುಣ್ಣವಾಯಿತು. 3G ಉಷ್ಣತೆ ಸ್ವಲ್ಪ ಜೋರಾಗಿಯೇ ತಗುಲಿಸಿಕೊಂಡ ದ್ರಾವಿಡ ಮುನ್ನೇಟ್ರಂ ಕಳಗಂ ತರಗೆಲೆಯಂತೆ ಉದುರಿತು ಜಯಲಲಿತಾ ಬಿರುಗಾಳಿಗೆ. ಇಲ್ಲೂ ಭಾರತದ ಅತಿ ದೊಡ್ಡ ಪ್ರತಿಪಕ್ಷಕ್ಕೆ ಅತಿ ದೊಡ್ಡ ನಿರಾಶೆಯೇ ಕಾದಿತ್ತು. ಹೀಗೆ ಕರ್ನಾಟಕವನ್ನು ಬಿಟ್ಟರೆ ದಕ್ಷಿಣದ ಯಾವುದೇ ರಾಜ್ಯದ ಮತದಾರ ಈ ಪಕ್ಷಕ್ಕೆ ಮಣೆ ಹಾಕದಿರಲು ಕಾರಣವೇನು? ಹಾಗೆಯೆ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಶಿಕಾರಿಪುರದ ಕೇವಲ ಒಂದು ಸ್ಥಾನದಿಂದ ಹಿಡಿದು ಈಗಿನ ಅಧಿಕಾರದ ಗದ್ದುಗೆ ಏರುವ ಭಾಜಪದ ಪಯಣದ ಯಶಸ್ಸಿಗೆ ಕಾರಣವೇನು? ಇತರೆ ಪಕ್ಷಗಳ ಅಸಡ್ಡೆ, ಅಧಿಕಾರ ದಾಹದ ಕಾರಣ ಬೇಸತ್ತ ಕರುನಾಡಿನ ಮತದಾರ last straw ಆಗಿ ಭಾಜಪವನ್ನು ಅಧಿಕಾರಕ್ಕೆ ಏರಿಸಿರಬಹುದೇ?
Rating
Comments
ಉ: “ನೀವು ಕರೆಮಾಡಿದ ಚಂದಾದಾರರು...
ಉ: “ನೀವು ಕರೆಮಾಡಿದ ಚಂದಾದಾರರು...