ಬಂಧು ನೀನಲ್ಲ, ಆದರೂ.....
ಬಂಧು ನೀನಲ್ಲ, ಬಳಗದವನಲ್ಲ,
ಆದರೂ ನೀನಿಲ್ಲದೆ ನಾನೀಗ ಒಂಟಿ.
ಒಲವಿಂದ ಅಡುಗೆ ಮಾಡಿ
ಪ್ರೀತಿಯಿಂದ ಬಡಿಸಿ
ಜೊತೆಯಾಗಿ ಉಂಡವರು ನಾವಲ್ಲವೇ?
ನೀನಿಲ್ಲದಿದ್ದಾಗ ನಿನ್ನದೇ ನೆನಪಲ್ಲಿ
ಮಂಜಾದ ಕಣ್ಣುಗಳನ್ನು ಹೇಗೆ ಸಂತೈಸಲಿ?
ನಿನಗೆ ನಾ ಗೆಳೆಯನಲ್ಲದಿದ್ದರೂ
ನೀ ನನ್ನ ಉಸಿರು ಹೌದು ತಾನೆ!
ಉಸಿರು ಇಲ್ಲದೆ ಜೀವ ಇರುವುದೇ ಹೇಳು..?
Rating