ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಕೆಹೂಂ...ಕೆಹೂಂ ನಾ...ಕೆಹೂಂ ಕೆಹೂಂ...ಕೆಹೂಂನಾ...
ಬಿಡದೇ ಬರುತ್ತಿದ್ದ ಕೆಮ್ಮಿಗೆ ಸ್ವಲ್ಪ ರಾಗ ಸೇರಿಸಿ ಕೆಮ್ಮಿದ್ದು...
ರಾಗ ಜೋರಾಗಿ ೮ನೇ ಮನೆ ತಲುಪುವ ಲಕ್ಷಣ ಕಾಣಿಸಿದಾಗ, ನನ್ನಾಕೆ ಕಷಾಯ ಮಾಡಿ ಕೊಡಲು ಬಂದಳು. "ಇದು ಇಪ್ಪತ್ತೊಂದನೇ ಶತಮಾನದ ಕೆಮ್ಮೆ! ನಿನ್ನ ೧೮ನೇ ಶತಮಾನದ ಕಷಾಯಕ್ಕೆ ಬಗ್ಗುವುದಿಲ್ಲ. ಇದಕ್ಕೆ ಡಾಕ್ಟ್ರೇ ಆಗಬೇಕು." ಎಂದು ಕ್ಲಿನಿಕ್‌ಗೆ ಓಡಿದೆ.
ಸಿರಪ್, ಮಾತ್ರೆ ಎಲ್ಲಾ ಸೇವಿಸಿ... ಆಫೀಸ್, ರಸ್ತೆ, ಮನೆಯಲ್ಲಿ ಅಗತ್ಯಬಿದ್ದಾಗ ಮಾತ್ರ ಕಣ್ಣು ತೆರೆದು ಉಳಿದಂತೆ ಹಾಯಾಗಿ ನಿದ್ರೆ ಮಾಡಿದ್ದೇ ಮಾಡಿದ್ದು! ಮಾತ್ರೆ ಸಿರಪ್ ಮುಗಿದ ಕೂಡಲೇ "ಕೆಹೂಂ ನಾ ಪ್ಯಾರ್ ಹೆ" ಶುರು..
ಪುನಃ ಡಾಕ್ಟ್ರ ಭೇಟಿ- ಈ ಸಲದ ಭೇಟಿ ಸ್ವಲ್ಪ ಕಾಸ್ಟ್ಲೀ. ಎಲ್ಲಾ ಟೆಸ್ಟ್‌ಗಳನ್ನು ಮಾಡಿ, "ಯಾವುದೇ ತೊಂದರೆ ಇಲ್ಲ. ರಸ್ತೆಯಲ್ಲಿ ಮೆಟ್ರೋ ಕೆಲಸ ನಡೆಯುತ್ತಿದೆಯಲ್ಲಾ..ನಿಮಗೆ ಡಸ್ಟ್ ಎಲರ್ಜಿ" ಅಂದರು. ನನ್ನ ಆರೋಗ್ಯದ ದೃಷ್ಟಿಯಿಂದ ಮೆಟ್ರೋ ಕೆಲಸಕ್ಕೆ ಕೋರ್ಟ್‌ನಿಂದ ಸ್ಟೇ ಆರ್ಡರ್ ತರಬೇಕೆಂದು ಆಲೋಚಿಸುವಾಗ ನೆನಪಾಯಿತು-" ಡಾಕ್ಟ್ರೇ, ನಾನು ಹೋಗುವ ರಸ್ತೆಗೆ ಮೆಟ್ರೋದವರ ಕಣ್ಣು ಇನ್ನೂ ಬಿದ್ದಿಲ್ಲ" ಎಂದೆ.
"ಹಾಗಿದ್ರೆ, ರಸ್ತೆ ಬದಿ ಜ್ಯೂಸ್?ಐಸ್ಕ್ರೀಂ..?" ಕೇಳಿದರು ಡಾಕ್ಟ್ರು.
"ಐಸ್‌ಕ್ರೀಮ್!!"- ಹಿಂದೆ ಯಾವತ್ತೋ ಐಸ್‌ಕ್ರೀಮ್ ಕಂಪೆನಿಯೊಂದರ ಶೇರ್ ತೆಗೆದುಕೊಂಡಿದ್ದೆ. ಅವರು ವರ್ಷ ವರ್ಷ ಫ್ರೀ ಕೂಪನ್‌ಗಳನ್ನು ಕಳುಹಿಸುತ್ತಿದ್ದರು. ಬೇಸಿಗೆಯ ಎಪ್ರಿಲ್-ಮೇ ತಿಂಗಳು ಪೂರ್ತಿ ಎರಡೂ ಹೊತ್ತು ಫ್ರೀ ಐಸ್‌ಕ್ರೀಮ್ ತಿನ್ನುವುದು ರೂಢಿಯಾಗಿತ್ತು. ನಂತರ ಕೂಪನ್ ಬರುವುದು ನಿಂತರೂ ರೂಢಿ ಬಿಟ್ಟು ಹೋಗಲಿಲ್ಲ.
"ಕೂಡದೇ ಕೂಡದು" ಡಾಕ್ಟ್ರು ಕಟ್ಟುನಿಟ್ಟಾಗಿ ಹೇಳಿದರು.
"ಸಾಧ್ಯವೇ ಇಲ್ಲಾ" ಅಂದೆ, ಮನಸ್ಸಿನಲ್ಲೇ..
ಮಾತ್ರೆ ಸಿರಪ್ ಜತೆ ಆ ರಾತ್ರಿ ಸ್ವಲ್ಪ ಜಾಸ್ತಿಯೇ ಐಸ್‌ಕ್ರೀಮ್ ತಿಂದೆ. ರಾತ್ರಿ ಕೆಮ್ಮಿದ್ದೇ ಕೆಮ್ಮಿದ್ದು. ಕೆಮ್ಮಿನ ಜತೆ ಇತರ ಶಬ್ದಗಳೂ ಪಕ್ಕವಾದ್ಯ ನುಡಿಸಲು ಪ್ರಾರಂಭಿಸಿದವು. ಬೇಸಿಗೆ ಕಾಲವಾದ್ದರಿಂದ, ಅಕ್ಕಪಕ್ಕದ ಮನೆಗಳಲ್ಲಿ ಹಳೇ ಫ್ಯಾನ್‌ಗಳು ತಿರುಗುತ್ತಿರುವ ಶಬ್ದವೇ ಜಾಸ್ತಿ ಇರುವುದರಿಂದ, ನನ್ನ ಸಂಗೀತ ಕಚೇರಿಯಿಂದ ಅವರಿಗೆ ತೊಂದರೆ ಅಷ್ಟು ಆಗಿರಲಿಕ್ಕಿಲ್ಲ. ಊರಿಗೆ ಊರೇ ಮಲಗಿರುವಾಗ ಈ ಹಾಳು ಕೆಮ್ಮು ನನಗೆ ಕಣ್ಣು ಮುಚ್ಚಲೂ ಬಿಡುತ್ತಿಲ್ಲ.. ಮಲಗಿದಾಗ ಕೆಮ್ಮು ಬರಲು ಕುಳಿತೆ, ಕುಳಿತು ಕೆಮ್ಮಲು ನಿಂತೆ, ನಿಂತಾಗಲೂ ಬಿಡದಿದ್ದಾಗ ನಲಿದೆ. ಅಯ್ಯೋ, ರಾಮಾ..ಈ ಸಲ ಕೆಮ್ಮು ನಿಂತರೆ ಮುಂದೆ ಐಸ್‌ಕ್ರೀಮ್ ತಿನ್ನುವುದೇ ಇಲ್ಲ ಎಂದು "ಹರಕೆ" ಮಾಡಲು ಹೊರಟೆ. ಆದರೆ ಮನಸ್ಸು ಒಪ್ಪಲೇ ಇಲ್ಲ. ಕೊನೇ ಪ್ರಯತ್ನ ಎಂದು..............
ಪಕ್ಕದಲ್ಲೇ ಇದ್ದು ನಿದ್ರೆಯ ನಾಟಕ ಮಾಡುತ್ತಿದ್ದಳಲ್ಲಾ..ಅವಳಿಗೆ ಶರಣು ಹೋದೆ. " ಏಳೆ ಕೆಹೂಂ ರಾಣಿ, ಕೆಹೂಂ ಕೆಹೂಂನ ಮುದ್ದಿನ ರಾಣಿ, ಅದೇನೋ ಕೆಹೂಂಕಷಾಯ ಹೇಳಿದ್ಯಲ್ಲಾ...ಮಾಡಿ ಕೆಹೂಂ ಕೊಡೆ.." ಎಂದು ಬೇಡಿದೆ. ಹದಿನೆಂಟನೇ ಶತಮಾನ ಅದೂ.. ಇದೂ.. ಏನೋ ಹೇಳಿಕೊಂಡು ಹೋದಳು. ಅದ್ಯಾವುದೂ ನನ್ನ ಕಿವಿಗೆ ಬೀಳದಂತೆ ಕೆಮ್ಮು ಸಹಕರಿಸಿತು.
ಕಷಾಯ ಕುಡಿದು ಕೆಮ್ಮುತ್ತಾ ಕುಳಿತಿದ್ದೆ. ಎಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ..ಬೆಳಗ್ಗಿನವರೆಗೆ ಒಳ್ಳೆಯನಿದ್ರೆ!!
ಅಲ್ಲಿಂದೀಚೆಗೆ ಕೆಮ್ಮು ನನ್ನ ಬಳಿ ಸುಳಿದಿಲ್ಲ. ಬೇಸಿಗೆಯಲ್ಲಿ ಐಸ್‌ಕ್ರೀಮ್,ಫ್ರುಟ್‌ಸಲಾಡ್ ಬಿಟ್ಟೇ ಇಲ್ಲಾ. ಕಷಾಯಾನೂ ರಾತ್ರಿ ಹಗಲೂ ಕುಡಿಯುತ್ತಿದ್ದೆ! ಕಷಾಯ ಎಂದರೆ ಗಾಬರಿಯಾಗಬೇಕಿಲ್ಲ. ಕಾಫಿಗಿಂತ ರುಚಿಯಾಗಿದೆ. ಮಾಡುವುದೂ ಸುಲಭ. ಎರಡು "ದೊಡ್ಡಪತ್ರೆ" ಎಲೆ, ಒಂದು ಸಣ್ಣ ತುಂಡು ಬೆಲ್ಲ ನೀರಿಗೆ ಹಾಕಿ ಕುದಿಸಿದರಾಯಿತು!! ಏನು ರುಚಿ..ಏನು ಪರಿಮಳ!!! ಆಹಾ...
ನನ್ನ ಐಸ್ಕ್ರೀಂನ ಪ್ರೀತಿಗೆ ತೊಂದರೆ ಬರದಂತೆ ನೋಡಿಕೊಂಡ ದೊಡ್ಡಪತ್ರೆಗಿಡ ಎಲ್ಲೇ ಕಂಡರೂ ದೊಡ್ಡ ನಮಸ್ಕಾರ ಹಾಕುತ್ತೇನೆ.
ಸುಂದರ ಗಿಡ. (Coleus aromaticus) ಅದಕ್ಕೂ ಚಂದದ ಎಲೆ.
ಎಲೆ ಹಿಂಬದಿ ನೆಟ್‌ವರ್ಕ್ ಇನ್ನೂ ಚಂದ.
ಇನ್ನುಳಿದ ವಿವರ ಚೊಕೋ ಬಾರ್ ತಿಂದ ಬಳಿಕ..
(ಶಾಸನ ವಿಧಿಸಿದೆ ಎಚ್ಚರಿಕೆ- ಸ್ವಯಂ ವೈದ್ಯ ಒಳ್ಳೆಯದಲ್ಲ. ವೈದ್ಯರ ಸಲಹೆ ಪಡೆಯಿರಿ.)
ಸಂಪದದಲ್ಲಿ ದೊಡ್ಡ ಪತ್ರೆ ಚಿತ್ರ ನಾಡಿಗರಿಂದ- http://sampada.net/image/5191
-ಗಣೇಶ.
(ಐಸ್‌ಕ್ರೀಂ ಕೆಲ ಫೋಟೋಗಳು - ನೆಟ್ ಕೃಪೆ )
Comments
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by vani shetty
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by ಗಣೇಶ
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by vani shetty
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by partha1059
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by ksraghavendranavada
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by ksraghavendranavada
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by manju787
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by sasi.hebbar
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by venkatb83
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ.. by makara
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..ಗಣೇಶ್ ಅಣ್ಣ- ...???
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..ಗಣೇಶ್ ಅಣ್ಣ- ...??? by venkatb83
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..ಗಣೇಶ್ ಅಣ್ಣ- ...???
In reply to ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..ಗಣೇಶ್ ಅಣ್ಣ- ...??? by ಗಣೇಶ
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..ಗಣೇಶ್ ಅಣ್ಣ- ...???
ಉ: ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..
ಗಣೇಶ್ ಜಿ, ಈಗ ದೊಡ್ಡ ಪತ್ರೆ ಎಲೆ ಸಿಂಗಪುರದ ಲಿಟ್ಲ್ ಇಂಡಿಯಾದಲ್ಲಿ ಸಿಗುತ್ತಾ ಅಂತ ಅರ್ಜೆಂಟಿನಲ್ಲೆ ಇನ್ವೆಸ್ಟಿಗೇಶನ್ ಶುರು ಮಾಡ್ಬೇಕು !