ಬರುವ ರವಿ
ಕವನ
ಬರುವ ರವಿ
ಗಗನಕೆ ಬೆಳಕನು ಹರಡಿ
ಬರುತಿಹ ರವಿಯು ನೋಡಿ |
ಕತ್ತಲೆ ಮೆಲ್ಲನೆ ಕರಗಿ
ಹೋಗಿದೆ ಬಾರದೆ ತಿರುಗಿ |
ರವಿಯಿರೆ ಬಾರದು ತಿರುಗಿ || ಪ ||
ಮೂಡಣ ಕೆಂಪಾಗಿತ್ತೋ
ನೀಲವು ಹೊನ್ನಾಗಿತ್ತು |
ನೆಲದ ಹುಲ್ಲಿನಲಿ ಮಂಜಿನ ಹನಿಯು
ಮುತ್ತಿನಂತೆ ಇತ್ತು |
ಮೇಗಡೆ ತೆಳ್ಳನ ಬೆಳಕಿತ್ತು ||
ಸನಿಹದ ಮೊಗ್ಗು ಅರಳುತಲಿತ್ತು
ರವಿ ಬರುವುದು ಗೊತ್ತು
ಅದಕೆ ರವಿ ಬರುವುದು ಗೊತ್ತು |
ಇಲ್ಲಿದೆ ಚೆಲುವಿನ ಗಮ್ಮತ್ತು ||೧||
ಎಚ್ಚರ ಎಚ್ಚರವೆಂದು
ಎಬ್ಬಿಸಿ ಸಡಗರ ತಂದು |
ಮೂಡಿಸಿ ಸಂಚಲನವನೆಲ್ಲೆಡೆಯೂ
ಏರಿ ಏರಿ ಬಂದು |
ತಾನು ಉರಿಉರಿಯುತ ನಿಂದು ||
ನಸುಕು ಬೆಳಗು ಮಧ್ಯಾಹ್ನಗಳು
ರವಿಯಿಂದಲೆ ಎಂದು
ದಿನ ಋತು ಕಾರಣನಿವನೆಂದು |
ಈತನೆ ಮಿತ್ರನು ಜಗಬಂಧು ||೨||
- ಸದಾನಂದ
Comments
ಉ: ಬರುವ ರವಿ
In reply to ಉ: ಬರುವ ರವಿ by raghumuliya
ಉ: ಬರುವ ರವಿ