ಪಯಣಿಗ ಮತ್ತು ಅವಳು...

ಪಯಣಿಗ ಮತ್ತು ಅವಳು...

ಕವನ

ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ...

ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ...

 

ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ...

ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸಿಹನು ಸೋಲಿನೊ೦ದಿಗೆ ಹೊಡೆದಾಟ...

 

ಗುರಿಯಿಲ್ಲದ ದಾರಿಯಲ್ಲಿ ಅವನ ಪಾಲಾಗಿಹಳು ಮರ್ಮ ಒಳಮರ್ಮಗಳ ನಾಯಕಿ...

ಸವಿಮಾತುಗಳ ಪರದೆ ಎಳೆಯುತ್ತ, ಅವಕಾಶಕ್ಕೆ ಕಾದಿರುವ ಅವಳು ಪ್ರೀತಿಗೆ ಪಾತಕಿ...

 

ನಸು ನಾಚುತ್ತ, ಎಲ್ಲಾ ಮರೆ ಮಾಚುತ್ತ ಹಾಡಿಹಳು ಹಾಡಲಾಗದ ಹಾಡು...

ಭೂತವ ದೇವರೆನುತ್ತ, ಮುಗ್ಧವಾಗಿ ಬಣ್ಣಿಸಿಹಳು, ಪ್ರೀತಿಯ  ಮೇಲ್ಲಿದ್ದ ಅವಳ ಸೇಡು...

 

ಯಾರೋ ಮಾಡಿದ ಪಾಪದ ಫಲಕ್ಕೆ, ರೂಪ ನೀಡಿದ ದೇಹದ ಒಡತಿ ಅವಳು...

ಪಯಣಿಗನಿಗೆ ಕಾದು ಕುಳಿತ ಕುಮಾರಿಯ ಕನಸ ಅಳಿಸಿದವಳು ಅವಳು...

 

ಜೀವವಿದ್ದರೂ ಬರಡಾಗಿ, ಕನಸ್ಸಿದ್ದರೂ ಕುರುಡಾಗಿ, ಮೂಖವಾಗಿದೆ ಪ್ರೀತಿ...

ನಿಜವ ಅರಸಿದವನ ಪಾಲಾಗಿದೆ, ನಿಜವ ಅರಿಯುವ ಭೀತಿ...

 

ಕರಗಿದ ಕನಸುಗಳ ಕಾಲುವೆಯಲ್ಲಿ ಸಾಗಿದೆ ಅಸಹಾಯ ಪ್ರಯಾಣ...

ಎದೆಗು೦ದಿದ ಪಯಣಿಗನಿಗೆ ಚುಚ್ಹಿ ನೋಯಿಸಿದೆ ಮುರಿದು ಹೋದ ಪ್ರಮಾಣ...