ನೆನಪೇ ಕಾಡದಿರು ಮತ್ತೆ

ನೆನಪೇ ಕಾಡದಿರು ಮತ್ತೆ

ಕವನ

  

  • ಗೆಣಸು ಹಚ್ಚಸಿರು
  • ರಾಗಿತೆನೆ ನೆಲಗಡಲೆ
  • ಅವರೆ ಹಸಿ ಮೆಣಸಿನ
  • ಕಾಯಿಗಳ ಸುಟ್ಟು
  • ಕಲ್ಲ೦ಗಡಿ ಎಳೆನೀರು 
  • ಸೌತೆಕಾಯಿಗಳ ಕೊಯ್ದು
  • ಬಾರೆ ಕಾರೆ  ನೇರಳೆ 
  • ತೊ೦ಡೆ ಹೀಚಲ 
  • ಹಣ್ಣುಗಳ ಕಿತ್ತು 
  • ಗೆಳಯರೊಡಗೊಡಿ 
  • ಕಾಡು ಮೇಡುಗಳಲದು
  • ಸವಿದ ಬಾಲ್ಯದ ನೆನಪೇ
  • ಬಾರದಿರು ಮತ್ತೆ
  •  
  • ದೊಡ್ಡಪ್ಪ ನನ್ನ ಅಣ್ಣ 
  • ತಮ್ಮ ಮಾವ೦ದಿ
  • ರೂಡಗೂಡಿ 
  • ನಿ೦ತ ನೀರನ
  • ಗು೦ಡಿಗಳನುಗ್ಗಿ
  • ಮೀನುಗಳನಿಡಿದು
  • ಮೆಣಸಿನ ಕಾಯಿ
  • ತೆ೦ಗು ಹುಣಸೆ 
  • ಬೆಳ್ಳುಳ್ಳಿಗಳ ರುಬ್ಬಿ
  • ರಾಗಿ ಮುದ್ದೆಯ ಸವಿದ 
  • ಸವಿ ನೆನಪೇ
  • ಕಾಡದಿರು
  • ನೀನನ್ನ ಮತ್ತೆ ಮತ್ತೆ
  •  
  • ನೆಲದ ಮೆಲಾಸಿದ ಚಾಪೆ 
  • ಮ೦ಡಕ್ಕಿ ಮೆಣಸಿನ ಕಾಯಿ
  • ರಾತ್ರಿ ಹನ್ನೆರಡಕ್ಕೆ
  • ಅರ೦ಬ, ನೆತ್ತಿಯ ಮೇಲೆ 
  • ಬೆಸಿಲು ಬೀಳುವವರೆಗೆ
  • ತೆರೆ ಬೀಳದ ಕುರುಕ್ಷೇತ್ರ
  • ಮತ್ತೆ ನೋಡುವ ತವಕ
  • ಬಾರದಿರು ಮತ್ತೆ
  •  
  • ಉತ್ಸವದ ನೆವದಲ್ಲಿ
  • ಊರ ಬಾಗಿಲಿಲಿ ನಿ೦ದು
  • ನಿನ್ನ ಸಿಹಿ ನಗುವಿನ ಮೋಗ
  • ಕಾಣೆ ರೊಮ೦ಚನ 
  • ಗೊ೦ಡ,ಆ ಎಳೆಯ
  • ಯವೌನದ ದಿನಗಳ 
  • ನೆನಪೇ
  • ಸೆಳಯದಿರು
  • ನೀ ನನ್ನ ಮತ್ತೆ ಮತ್ತೆ
  •  
  • ಚಿಗುರು ಮೀಸೆಯ
  • ಹೊಸ ಹುರುಪಿನ
  • ತು೦ಬು ಯವೌನದ
  • ದಿನಗಳಲಿ
  • ಮೊದ ಮೊದಲ
  • ಮಾತಿನಲಿ ಕವನದಲಿ 
  • ಹುಸಿ ಮುನಿಸು
  • ಕಿರು ನೋಟ ಬೀರಿ 
  • ಕಣ್ಣುಗಳೆ ಮಾತಾಡಿ
  • ಸೆಳೆದ ನನ್ನಯ ಗೆಳತಿ
  • ಕೊಸರಾಟದಲಿ ಬಸ್ಸಿನಲಿ
  • ಸೈಕಲ್ಲು, ಮಲ್ಪ್ಪೆ
  • ಬೀಚು ಪ್ರಾವಾಸ 
  • ನಕ್ಕು ನಗಿಸಿದ ಗೆಳಯರ ಬಳಗ
  • ರಾತ್ರಿ ಬಾರಿನಲಿ ದುಡಿದು
  • ಕಾಲೇಜು ಪೂರೈಸಿ
  • ಈಗ ವಿಜ್ಞ್ಞಾನಿ
  • ಸೈಕಲು ಶಾಪು ರಮೇಶ
  • L. I.C. ಎಜ೦ಟ ಗೀರೀಶ
  • ತೋಟದ ದೀಪು
  • ಬಟ್ಟೆ ಅ೦ಗಡಿ ಫಾತಿಮಾ
  • ವೈದ್ಯನಾದ ಸುಕೇಶ 
  • ಬಸ್ಸಿನ ಡ್ರೈವರ್ ಮಲ್ಲಿ
  • ಬೊ೦ಡಾ ಹಾಕುವ ಕಮಲಾ
  • ಹೀಗೆ ಹತ್ತಾರು ನೂರಾರು 
  • ದಿಕ್ಕುಗಳಿಗರಡಿದ ಗೆಳಯರ
  • ದ೦ಡಿ ದ೦ಡನು ಕೊಟ್ಟ 
  • ಕಾಲೇಜು ರ೦ಗು ರ೦ಗಿನ ರ೦ಗ
  • ಕರೆಯದಿರು ನನ್ನ 
  • ಸವಿ ನೆನಪಿನ ದಿನಕೆ ಮತ್ತೆ ಮತ್ತೆ
  •  
  • ಸುಖದಲ್ಲಿ ಗೆಲುವಿನಲಿ 
  • ಹಣದಲ್ಲಿ ಐಬೋಗದಲಿ 
  • ಕಾರಿನಲಿ ಆಗಸದ ಹಕ್ಕಿಯಲಿ
  • ತೇಲಾಡಿ ಓಲಾಡಿ ಮೈ ಮರೆತು 
  • ಹೆತ್ತವರ ಕಷ್ಟದಲಾದವರ
  • ನೆನಪಿರದ ಹಾಗೆ
  • ಬದುಕ ಬದುಕುವವರ 
  • ನೆನಪಿನ ನೆನಪೇ 
  • ಸುಳಿಯದಿರು ನೀ ನನ್ನ 
  • ಬದುಕಿನಲಿ ಎ೦ಬ 
  • ಕೋರಿಕೆಯು ನಿನ್ನಲ್ಲಿ 
  • ಮತ್ತೆ ಮತ್ತೆ 

  • ಜ್ಞಾನ ವಿಜ್ನ್ನಾನಕ್ಕೆ
  • ಬದುಕನ್ನೆ ಬಲಿ ಕೊಟ್ಟ
  • ಕಾಲ ಕಾಲಕ್ಕೆ  
  • ಸಮಾಜದುದ್ದಾರಕ್ಕೆ 
  • ಸ್ವಾತ೦ತ್ರ್ಯ ಹೋರಾಟಕ್ಕೆ 
  • ನೇಣುಗಂಬಕ್ಕೆ ಮುತ್ತಿಟ್ಟ 
  • ದೀರ ವೀರರ ನೆನಪೇ
  • ಹಗಲು ರಾತ್ರಿಯನೂರದೊಡಿ
  • ದುಡಿವ ಶ್ರಮಿಕರ ಬೆವರಿನ ನೆನಪೇ
  • ನೆಲಸಿಬಿಡು ಎಲ್ಲರೆದೆಯಲ್ಲಿ
  • ಕತ್ತಲರಿಯುವವರೆಗೆ 
  • ಹೊಸ ಸೂರ್ಯನೂದಯುಸುವವರೆಗೆ
  •  
  • ಬೇಸರದ ದಿನಗಳಲಿ
  • ಎಕಾ೦ತದಲಿ
  • ಸುಕ್ಕಾದ ಮುಪ್ಪಿನಲಿ
  • ನೆನಪಿನ ತೇರು
  • ಕಣ್ಣಾಲಿಗಳಲನಿಗೊಡಿ
  • ಬರಲೆ೦ಬ ಹ೦ಬಲವು 
  • ತೋರು ಕರುಣೆಯ ನೀನು
  • ಪ್ರೀತಿಯ ಗೆಳಯ, ಆತ್ಮೀಯ
  • ನೆನಪೇ 
  •  
  •  
  •  
  •