ಚುಟುಕು ಸಂಕಲನ

ಚುಟುಕು ಸಂಕಲನ

ಕವನ

  ತಾಜ್ ಭವನ
ನೋಡದೇ ನಿನ್ನ ಚೆಲುವ
ಬರೆದ ಪ್ರೀತಿಯ ಕವನ,
ಅಕ್ಷರಗಳಲ್ಲಿ ಮೂಡಿಸಿವೆ
ನಿನಗಾಗಿ ನನ್ನ ತಾಜ್ ಭವನ 


 ಸೌಂದರ್ಯ
ಸೌಂದರ್ಯವೆನ್ನುವುದು ಸದಾ ಅನುಭವಿಸಬಹುದಾದ ಸುಖ
ಎಂದು ಹೇಳುವ ಪ್ರತಿಯೊಬ್ಬ ಯುವಕ,
ಹುಡುಗಿಯರಲ್ಲಿ ಮಾತ್ರ ಸೌಂದರ್ಯ ಕಾಣುವ ರಸಿಕ
ತನ್ನ ಕಾಮದಾಸೆಗೆ ಸೌಂದರ್ಯದ ಮುಖವಾಡವಿಟ್ಟ ಕೀಚಕ 


ಜಾತಿ
ಅಂದು ಮದುವೆಗೆ
ಒಂದೇ ಜಾತಿಯಾಗಬೇಕು
ಗಂಡು-ಹೆಣ್ಣಿನದು,
ಇಂದು ಸಹ ಮದುವೆಗೆ
ಒಂದೇ ಜಾತಿಯಾಗಬೇಕು
ಗಂಡಿಗೆ-ಗಂಡೇ ಜಾತಿಯದು!


( ವಿ.ಸೂ.: ಈ ಹಿಂದೆ, ಕೆಲವು ತಿಂಗಳುಗಳ ಹಿಂದೆ ಸಲಿಂಗ ವಿವಾಹಕ್ಕಾಗಿ ಕೋರ್ಟ್‍‍ನಲ್ಲಿ ಸಂವಾದ ನಡೆದಾಗ ಸಾಂದರ್ಭಿಕವಾಗಿ ಬರೆದದ್ದು )