ಬಾಳಿನ ಆಶಾಕಿರಣನೀನು
ಬಾಳಿನ ಆಶಾಕಿರಣನೀನು
ನನ್ನೆದೆಯ ಭಾವನೆಗಳ ಜೀವಾಳ ನೀನು
ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು
ನನ್ನ ಚಂಚಲ ಮನದಶ್ವದ ಸವಾರ ನೀನು
ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ
ನಾ ಕಳೆವ ಪ್ರತಿಕ್ಷಣವ ಬಲ್ಲೆನೀ
ನಾಕಳೆಯುತಿರುವ ಕ್ಷಣಗಳ ರೂವಾರಿ ನೀನು
ನಾ ಕಂಡ ಬದುಕಿನ ಅರ್ಥ ನೀನು
ನಿನ್ನ ಅಸ್ತಿತ್ವವ ಅನುಭವಿಸಿದೆನಾ
ಅರಳಿದ ಸುಮಗಳಲ್ಲಿ ಝೇಂಕರಿಸುವ ಭ್ರಮರಗಳಲ್ಲಿ,
ಚಿಲಿಪಿಲಿಗುಟ್ಟುವ ಹಕ್ಕಿಗಳಲ್ಲಿ,
ಕಿಲಿಕಿಲಿ ನಗುವ ಮುಗ್ಧ ಹಸುಳೆಗಳಲ್ಲಿ
ಮೇಲ್ನೋಟಕ್ಕೆನಿಲುಕದ ಪಾರಲೌಕಿಕಶಕ್ತಿ
ಅನುಭವಗಮ್ಯವೆಂದು ಅರಿತೆನಾ
ಭೌತಿಕ ಭಾವನೆಗಳಿಗೆಟುಕದ ಅದ್ಭುತ ದೈವೀ ಶಕ್ತಿ
ಭಾವನಾತೀತವೆಂದು ತಿಳಿದೆ ನಾ
ಜೀವನದ ಹಲವು ಘಟ್ಟಗಳಲ್ಲಿ
ನನಗೊಂದು ಹೊಸ ತಿರುವು ನೀಡಿದೆ ನೀ
ಅನುಭವಗಮ್ಯನಾದ ನಿನ್ನ ಅವತಾರಿಕ ಮಹಿಮೆಯ
ಸ್ವಾನುಭವದಿಂದನುಭವಿಸುವಂತೆ ಮಾಡಿದೆ ನೀ
ಬುದ್ಧಿಯ ಒರೆಗಲ್ಲಿನಿಂದ- ಬುದ್ಧಿಗೆಟುಕದ ನಿನ್ನ
ತಿಳಿಯಬಹುದೆನ್ನುವುದು ಎಂಥ ವೈಪರೀತ್ಯ
ಪ್ರಬುದ್ಧರಲ್ಲದ ಹುಲುಮನುಜಳು ನಾನು
ಎನಗಳವೆ ಅರಿಯಲು ನಿನ್ನ ಸೃಷ್ಟಿಯ ವೈಚಿತ್ರ್ಯ
ಸೂರ್ಯನ ತಿಳಿಯೆ ಹೊರಟಿದೆ ಮಿಣುಕು ಹುಳ
ಉಪ್ಪಿನ ಗೊಂಬೆ ಹೊರಟಿದೆ ಪರೀಕ್ಷಿಸೆ ಸಾಗರದಬಲಾಬಲ
ಪರಮಹಂಸರ ಮಾತಿದು ಕುರುಡರು ಆನೆಯ ವರ್ಣಿಸಿದರಂತೆ
ಕಾಲಕಂಡು ಕಂಬವೆಂದು ಬಾಲವಕಂಡು ಹಾವಿನಂತಿದೆಯೆಂದರಂತೆ
ಪ್ರೇಮದ ಮಳೆಯ ಸುರಿಸಿದೆ ನೀ ಸತ್ಯಸಾಯಿಯಾಗಿ
ಪ್ರೇಮವನರಿಯದೆ ಹೊರಟರು ಹಲರು-ತಿಳಿಯಲು ನಿನ್ನ ಪವಾಡಗಳ ಮೂಲ
ಪ್ರೇಮದ ಭಾಷೆಯ ತಿಳಿಯಲಿಲ್ಲ ತಿಳಿದರು ನಿನ್ನ ಆಸ್ತಿಯ ವಿವರ
ಪ್ರೇಮಮಯಿಯೆ ಹುಡುಕಿದರು ನಿದ್ದೆಗೆಟ್ಟು ನಿನ್ನಗೋತ್ರ ಪ್ರವರ
ಎನಾದರೂ ಮಾಡಲಿ ಬಿಡು ಜಗವ ಪ್ರಶ್ನಿಸಲುಂಟೆ
ನೀ ಚಿನ್ಮಯಮೂರ್ತಿಯೆಂಬುದಕೆ ಸಂಶಯವುಂಟೆ
ನೀನಲ್ಲ ಭೌತಿಕ ಶರೀರ ನನಗದು ಗೊತ್ತು
ನೀ ಕಲಿಸಿದ ಹಾದಿಯಲಿ ಸಾಗಲು ನಡೆದಿದೆ ಕಸರತ್ತು
ಆದರೂ
ನಡೆದಾಡುವ ದೇವನ ನೋಡುತಲಿದ್ದೆ.
ಕಡೆದು ಮನವ ನಿನಗೊಪ್ಪಿಸಿ ನಲಿಯುತಲಿದ್ದೆ
ನಿರಾಕಾರನನು ಕಾಣುವುದು ಯೋಗಿಗಳಿಗೇ ದುರ್ಲಭ
ಸಾಕಾರನನು ಕಂಡು ಆನಂದಿಸುತಲಿಮೆರೆದೆ
ನಿನ್ನ ನೋಟ ಇನ್ನೆಲ್ಲಿ? ನಿನ್ನ ಕರುಣೆಯಿನ್ನೆಲ್ಲಿ
ನಿನ್ನ ದರ್ಶನವಿನ್ನೆಲ್ಲಿ,ನಿನ್ನ ಸ್ಪರ್ಶನವಿನ್ನೆಲ್ಲಿ
ನನ್ನೊಳಗೆ ನಿನ್ನ ಕಾಣುವ ಪರಿಯ ಕಲಿಸಿಕೊದು ಸತ್ಯಸಾಯಿ
ನಾನುನೀನೆಂಬ ಭೇದವ ಮರೆಯುವರಿವ ಮೂಡಿಸಿಬಿಡು ಆನಂದದಾಯಿ
Rating
Comments
ಉ: ಬಾಳಿನ ಆಶಾಕಿರಣನೀನು
In reply to ಉ: ಬಾಳಿನ ಆಶಾಕಿರಣನೀನು by asuhegde
ಉ: ಬಾಳಿನ ಆಶಾಕಿರಣನೀನು
ಉ: ಬಾಳಿನ ಆಶಾಕಿರಣನೀನು
In reply to ಉ: ಬಾಳಿನ ಆಶಾಕಿರಣನೀನು by partha1059
ಉ: ಬಾಳಿನ ಆಶಾಕಿರಣನೀನು
ಉ: ಬಾಳಿನ ಆಶಾಕಿರಣನೀನು
In reply to ಉ: ಬಾಳಿನ ಆಶಾಕಿರಣನೀನು by prasannakulkarni
ಉ: ಬಾಳಿನ ಆಶಾಕಿರಣನೀನು